ಬೆಂಗಳೂರು: ಮೊಟ್ಟೆ ದರ ದರ ದಿಢೀರ್ ಗಗನಕ್ಕೇರಿದೆ. ಒಂದು ವಾರದ ಅವಧಿಯಲ್ಲಿ ಮೊಟ್ಟೆಯ ದರ 1.50 ರೂಪಾಯಿಗೆ ಏರಿಕೆ ಕಂಡಿದೆ.
ಕೋಳಿ ಸಾಗಾಣಿಕೆಗೆ ಅಗತ್ಯವಾದ ಮೆಕ್ಕೆಜೋಳ, ಸೋಯಾಬೀನ್ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಬೆಲೆಯಲ್ಲಿ ಶೇಕಡ 15ರವರೆಗೆ ಹೆಚ್ಚಳವಾಗಿದ್ದು, ಜೂನ್ ಅಂತ್ಯದವರೆಗೆ 5 ರೂಪಾಯಿ ಇದ್ದ ಕೋಳಿ ಮೊಟ್ಟೆ ದರ ಈಗ 6.50 ರೂ.ಗೆ ಏರಿಕೆಯಾಗಿದೆ.
ಮಳೆಗಾಲ, ಚಳಿಗಾಲದಲ್ಲಿ ಮೊಟ್ಟೆ ಬಳಕೆ ಹೆಚ್ಚಾಗಿರುತ್ತದೆ, ಉತ್ಪಾದನೆ ಕುಸಿತ ಉಂಟಾಗುತ್ತದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಸಗಟು ಮೊಟ್ಟೆ ದರ 4.35 ರೂ.ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 6.50 ರೂ.ಗೆ ಮಾರಾಟವಾಗುತ್ತಿದೆ.