ಹಕ್ಕಿ ಜ್ವರ ಮೊಟ್ಟೆ ಮಾರಾಟ ಹಾಗೂ ಮೊಟ್ಟೆ ಖರೀದಿ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಆದ್ರೆ ಮೊಟ್ಟೆ ಬೆಲೆ ಮೇಲೆ ಪರಿಣಾಮ ಬೀರಿದೆ. ಮೊಟ್ಟೆ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಹರ್ಯಾಣದ ಪ್ರಸಿದ್ಧ ಮೊಟ್ಟೆ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಇಳಿದಿದೆ. 100 ಮೊಟ್ಟೆ ಬೆಲೆ ಜನವರಿ 9ರಂದು 430 ರೂಪಾಯಿಯಾಗಿತ್ತು. ಇಂದು 100 ಮೊಟ್ಟೆ ಬೆಲೆ 300 ರೂಪಾಯಿಗೆ ಇಳಿದಿದೆ.
ಹರ್ಯಾಣದ ಬರ್ವಾಲಾವನ್ನು ದೇಶದ ಪ್ರಸಿದ್ಧ ಮೊಟ್ಟೆ ಮಾರುಕಟ್ಟೆ ಎನ್ನಲಾಗುತ್ತದೆ. ಪ್ರತಿ ದಿನ 1.25ರಿಂದ 15 ಮಿಲಿಯನ್ ಮೊಟ್ಟೆ ಮಾರಾಟವಾಗುತ್ತದೆ. ಹಕ್ಕಿ ಜ್ವರದಿಂದ ಕೋಳಿಗಳು ಸಾವನ್ನಪ್ಪುತ್ತಿವೆ ಎಂಬ ಸುದ್ದಿ ಹರಡಿದೆ. ಇದು ಮೊಟ್ಟೆ ಬೆಲೆ ಇಳಿಕೆಗೆ ಕಾರಣವಾಗಿದೆ. 7 ದಿನಗಳ ಹಿಂದೆ 100 ಮೊಟ್ಟೆ ಬೆಲೆ 550 ರೂಪಾಯಿಯಿತ್ತು.
ಮೊಟ್ಟೆ ಬೆಲೆ ಮಾತ್ರವಲ್ಲ ಕೋಳಿ ಮಾಂಸಕ್ಕೂ ಬೇಡಿಕೆ ಕಡಿಮೆಯಾಗಿದೆ. ಜನರು ಮೊಟ್ಟೆಗಿಂತ ಚಿಕನ್ ತಿನ್ನಲು ಹೆಚ್ಚು ಭಯಪಡುತ್ತಿದ್ದಾರೆ. ಇದೇ ಕಾರಣಕ್ಕೆ ಚಿಕನ್ ಬೇಡಿಕೆ ಇಳಿದಿದ್ದು, ಬೆಲೆ ಕೂಡ ಇಳಿದಿದೆ.