ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಉದ್ಯೋಗಿ ಭವಿಷ್ಯ ನಿಧಿ(ಇಪಿಎಫ್) ಚಂದಾದಾರರು ಹಣಕಾಸಿನ ವರ್ಷದಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಲ್ಲಿ ಪ್ರಸಕ್ತ ಹಣಕಾಸು ವರ್ಷದಿಂದ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಬಜೆಟ್ 2021-22 ಹೊಸ ನಿಬಂಧನೆಗಾಗಿ ಸಿಬಿಡಿಟಿ ಮಾರ್ಗಸೂಚಿ ಮಾಡಿದ ನಂತರ, 2.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವಾರ್ಷಿಕ ಪಿಎಫ್ ಕೊಡುಗೆಗಳ ಮೇಲೆ ಬಡ್ಡಿಯನ್ನು ವಿದಿಸಲಾಗುವುದು.
ಹಾಗಾಗಿ, ಎರಡು ಪ್ರತ್ಯೇಕ ಖಾತೆಗಳೊಂದಿಗೆ ಅಂದರೆ ತೆರಿಗೆ ಖಾತೆ ಮತ್ತು ತೆರಿಗೆಯಲ್ಲದ ಖಾತೆ ನಿರ್ವಹಿಸಬೇಕಿದೆ. ತೆರಿಗೆದಾರರು ಮತ್ತು ಆದಾಯ ತೆರಿಗೆ ಇಲಾಖೆಯು ಅಂತಹ ಹೂಡಿಕೆಗಳ ಮೇಲಿನ ಬಡ್ಡಿಯ ಲೆಕ್ಕಾಚಾರ ಮಾಡುವುದು ಸುಲಭವಾಗುತ್ತದೆ.
CBDT ಇತ್ತೀಚಿನ ಅಧಿಸೂಚನೆ ಅನ್ವಯ, 2021-22ರ ಬಜೆಟ್‌ನಲ್ಲಿ ಬಡ್ಡಿಗಳ ಮೇಲಿನ ತೆರಿಗೆಯನ್ನು ಘೋಷಿಸಿದ ನಂತರ ಉಂಟಾದ ಗೊಂದಲವನ್ನು ಕೊನೆಗೊಳಿಸಿದಂತಾಗಿದೆ.
2021-22ರ ಆರ್ಥಿಕ ವರ್ಷದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಅಧಿಸೂಚನೆಯು ಸೂಚಿಸುತ್ತದೆ. ಅಂದರೆ, ನಿಮ್ಮ ಎಲ್ಲಾ ಇಪಿಎಫ್‌ಒ ಕೊಡುಗೆಗಳ ಮೇಲೆ 2.5 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.
ಆದಾಗ್ಯೂ, ಉದ್ಯೋಗದಾತರ ಕಡೆಯಿಂದ ಕೊಡುಗೆಗಳನ್ನು ಪಡೆಯದ ಇಪಿಎಫ್‌ಒ ಖಾತೆಗಳಿಗೆ, ಪಿಎಫ್ ಹೂಡಿಕೆಗಳ ಮೇಲಿನ ಬಡ್ಡಿಯ ಮಿತಿಯನ್ನು 5 ಲಕ್ಷಕ್ಕೆ ನಿಗದಿಪಡಿಸಲಾಗಿದೆ.
ಚಂದಾದಾರರು ಅಥವಾ ಉದ್ಯೋಗದಾತರು ತೆರಿಗೆಯ ಖಾತೆಯನ್ನು ರಚಿಸಲು ಹೆಚ್ಚುವರಿಯಾಗಿ ಏನನ್ನೂ ಮಾಡುವ ಅಗತ್ಯವಿಲ್ಲ, ಏಕೆಂದರೆ ಎರಡನೇ ಖಾತೆಯು ಸ್ವಯಂಚಾಲಿತವಾಗಿ ತೆರೆಯಲ್ಪಡುತ್ತದೆ.
ಹೂಡಿಕೆಯ ಮೇಲಿನ ಬಡ್ಡಿಯ ಮೇಲಿನ ತೆರಿಗೆಯನ್ನು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಮಾಡಿದ ಹಿಂಪಡೆಯುವಿಕೆ ಕಡಿತಗೊಳಿಸಿದ ನಂತರ ಲೆಕ್ಕಹಾಕಲಾಗುತ್ತದೆ ಎನ್ನಲಾಗಿದೆ.