ಜನಸಾಮಾನ್ಯರ ಬದುಕು ಬೆಲೆ ಏರಿಕೆಗೆ ತತ್ತರಿಸಿ ಹೋಗ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಒಂದು ಕಡೆಯಾದ್ರೆ ಇನ್ನೊಂದು ಕಡೆ ಖಾದ್ಯ ತೈಲಗಳ ಬೆಲೆ ಅಡುಗೆ ರುಚಿಯನ್ನು ಹಾಳು ಮಾಡಿವೆ. ಕಳೆದ ಒಂದು ವರ್ಷದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡಾ 95 ರಷ್ಟು ಹೆಚ್ಚಳ ಕಂಡುಬಂದಿದೆ. ಮತ್ತೊಂದೆಡೆ ವಿವಿಧ ಖಾದ್ಯ ತೈಲಗಳ ಬೆಲೆಗಳು ಕಳೆದ ಒಂದು ವರ್ಷದಲ್ಲಿ ಶೇಕಡಾ 30 ರಿಂದ ಶೇಕಡಾ 60 ರಷ್ಟು ದುಬಾರಿಯಾಗಿದೆ.
ಪಾಮ್ ಆಯಿಲ್ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಸೋಯಾಬೀನ್ ತೈಲ ಬೆಲೆಗಳು ಹೊಸ ಉತ್ತುಂಗಕ್ಕೇರಿವೆ. ಅವುಗಳ ಬೆಲೆಗಳು ಒಂದು ವರ್ಷದಲ್ಲಿ ಶೇಕಡಾ 30 ರಿಂದ ಶೇಕಡಾ 60 ಕ್ಕೆ ಏರಿದೆ. ಬ್ರೆಜಿಲ್ ಹವಾಮಾನ ತುಂಬಾ ಕೆಟ್ಟದಾಗಿದೆ, ಅಲ್ಲಿ ಸಾಕಷ್ಟು ಮಳೆಯಾಗಿದೆ. ಸೂರ್ಯಕಾಂತಿ ತೈಲದ ಬೆಲೆ 1700 ಡಾಲರ್ ತಲುಪಿದೆ. ಇದು ದಾಖಲೆ ಮಟ್ಟದ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಸಾಗಣೆಯಲ್ಲಾದ ಅಡಚಣೆಯಿಂದಾಗಿ ಕೇವಲ 4 ಲಕ್ಷ ಟನ್ ಪಾಮ್ ಆಯಿಲ್ ಭಾರತಕ್ಕೆ ಬಂದಿದೆ. 4 ಲಕ್ಷ ಟನ್ ಸೋಯಾ ಆಯಿಲ್ ಬಂದಿದೆ. ಇನ್ನೂ ಎರಡು ತಿಂಗಳು ಬೆಲೆ ಇಳಿಕೆ ಸಾಧ್ಯವಿಲ್ಲವೆಂದು ತಜ್ಞರು ಹೇಳಿದ್ದಾರೆ.
ಖಾದ್ಯ ತೈಲದ ಜಾಗತಿಕ ಪೂರೈಕೆ ಕಡಿಮೆಯಾಗಿದೆ. ಉಪ ಇಂಧನಕ್ಕಾಗಿ ಕಚ್ಚಾ ಪಾಮ್ ಆಯಿಲ್ ಬೇಡಿಕೆ ಹೆಚ್ಚಾಗಿದೆ. ಚೀನಾದಲ್ಲಿ ಸೋಯಾಬೀನ್ ಬೇಡಿಕೆಯೂ ಹೆಚ್ಚುತ್ತಿದೆ. ಬ್ರೆಜಿಲ್ ಹಮಾವಾನ ಹದಗೆಟ್ಟಿದೆ. ಇವೆಲ್ಲವೂ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.