ನವದೆಹಲಿ: ಜನಸಾಮಾನ್ಯರಿಗೆ ಒಂದು ರಿಲೀಫ್ ನ್ಯೂಸ್ ಇಲ್ಲಿದೆ. ಕಳೆದ ವಾರ ವಿದೇಶಿ ಮಾರುಕಟ್ಟೆಗಳಲ್ಲಿ ಕಚ್ಚಾ ತಾಳೆ ಎಣ್ಣೆ(ಸಿಪಿಒ), ಪಾಮೋಲಿನ್ ಮತ್ತು ಸಾಸಿವೆ ತೈಲ ಬೆಲೆಗಳ ಸ್ಥಗಿತ ಕಾರಣ ದೇಶಾದ್ಯಂತ ತೈಲ-ಎಣ್ಣೆಕಾಳುಗಳ ಮಾರುಕಟ್ಟೆಗಳಲ್ಲಿ ಬಹುತೇಕ ಎಲ್ಲಾ ಖಾದ್ಯ ಎಣ್ಣೆಕಾಳುಗಳ ಬೆಲೆಗಳು ಸ್ಥಿರವಾಗಿವೆ.
ವಿದೇಶದಲ್ಲಿ ಖಾದ್ಯ ತೈಲಗಳ ಬೆಲೆ ಕುಸಿತದಿಂದ ಖಾದ್ಯ ತೈಲ ಉದ್ಯಮ, ಆಮದುದಾರರು ಮತ್ತು ರೈತರು ತೀವ್ರ ಕಂಗಾಲಾಗಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಆಮದುದಾರರು ಆಮದು ಮಾಡಿಕೊಂಡಿದ್ದ ಸಿಪಿಒ ಪ್ರತಿ ಟನ್‌ಗೆ ಸುಮಾರು 2,060 ಡಾಲರ್ ನಿಂದ ಈಗ ಕಾಂಡ್ಲಾ ಬಂದರಿನಲ್ಲಿ ಟನ್ ಗೆ 990 ಡಾಲರ್ ಗೆ ಇಳಿದಿದೆ. ಅಂತಹ ಪರಿಸ್ಥಿತಿಯಲ್ಲಿ ಉಳಿದ ಎಣ್ಣೆಕಾಳುಗಳ ಬೆಲೆಗಳ ಮೇಲೆ ಭಾರಿ ಒತ್ತಡ ಉಂಟಾಗಿದ್ದು, ಆಮದುದಾರರು ಮತ್ತು ತೈಲ ಉದ್ಯಮಕ್ಕೆ ಬಿಕ್ಕಟ್ಟು ಎದುರಾಗಿದೆ.
ಮೂಲಗಳ ಪ್ರಕಾರ, ಕಡಿಮೆ ಬಂಡವಾಳ ಹೊಂದಿರುವ ಉದ್ಯಮಿಗಳು ಈಗ ತೈಲ ವ್ಯವಹಾರವನ್ನು ತೊರೆಯಲು ಮುಂದಾಗಿದ್ದಾರೆ. ದರ ಇಷ್ಟೆಲ್ಲಾ ಇಳಿಮುಖವಾಗಿದ್ದರೂ ಗ್ರಾಹಕರಿಗೆ ಸೂಕ್ತ ಲಾಭ ಸಿಗುತ್ತಿಲ್ಲ ಎಂದು ಹೇಳಲಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಸಗಟು ಬೆಲೆಗಿಂತ 40-50 ಎಂ.ಆರ್.ಪಿ. ಇಟ್ಟುಕೊಂಡಿರುವುದರಿಂದ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಂದ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಿದ್ದಾರೆ.
ಖಾದ್ಯ ತೈಲ ವ್ಯಾಪಾರಿಗಳ ಪ್ರಕಾರ ಎರಡನೇ ದೊಡ್ಡ ಸಮಸ್ಯೆ ಎಂ.ಆರ್.ಪಿ.ಗೆ ಸಂಬಂಧಿಸಿದೆ. ಕಡಿಮೆ ಮಾರ್ಜಿನ್ ನಲ್ಲಿ ಮಾರಾಟ ಮಾಡಿದ ನಂತರ ಚಿಲ್ಲರೆ ವ್ಯಾಪಾರಿಗಳು ಈ ತೈಲವನ್ನು ಎಂಆರ್‌ಪಿ ನೆಪದಲ್ಲಿ ಸುಮಾರು 40-50 ರೂ. ಗೆ ಮಾರುತ್ತಾರೆ. ಆದರೆ, ಈ MRP ವಾಸ್ತವಿಕ ವೆಚ್ಚಕ್ಕಿಂತ 10-15 ರೂ. ಮೀರಬಾರದು. ಸರ್ಕಾರದೊಂದಿಗಿನ ಸಭೆಗಳಲ್ಲಿ ಚಿಲ್ಲರೆ ವ್ಯಾಪಾರಿಗಳು 50 ರೂ.ಗಿಂತ ಹೆಚ್ಚಿನ MRP ಅನ್ನು ಸಾಮಾನ್ಯವಾಗಿ 10-15 ರೂ.ಗಳಷ್ಟು ಕಡಿಮೆ ಮಾಡಲು ಒಪ್ಪುತ್ತಾರೆ, ಆದರೆ ಇದು ಜಾಗತಿಕ ಖಾದ್ಯ ತೈಲ ಬೆಲೆಗಳ ಕುಸಿತದ ಲಾಭವನ್ನು ಪಡೆಯಲು ಗ್ರಾಹಕರಿಗೆ ವಂಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.