ಬೆಂಗಳೂರು: 2019ರಲ್ಲಿ ನಡೆದಿದ್ದ ಅಜ್ಮೀರಾ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅಜ್ಮೀರಾ ಕಂಪನಿಗೆ ಸೇರಿದ 8.41 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ.
ಕಂಪನಿಗೆ ಸೇರಿದ ರೆಸಿಡೆನ್ಸಿಯಲ್ ಪ್ಲಾಟ್, ಕೃಷಿ ಭೂಮಿ, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೇರಿದಂತೆ ಸಂಪೂರ್ಣ ಆಸ್ತಿ ಜಪ್ತಿ ಮಾಡಲಾಗಿದೆ.
2019ರಲ್ಲಿ ಅಜ್ಮೀರಾ ಕಂಪನಿ ವಿರುದ್ಧ ಹೂಡಿಕೆದಾರರು ಸಿಸಿಬಿಗೆ ದೂರು ನೀಡಿದ್ದರು.
ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಕೂಡ ಅಜ್ಮೀರಾ ಕಂಪನಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು.