![](https://kannadadunia.com/wp-content/uploads/2023/12/vivo.png)
ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಕರು, ಇತರ ಕೆಲವರ ವಿರುದ್ಧದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿವೋ-ಇಂಡಿಯಾದ ಮೂವರು ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ.
ವಿವೋ-ಇಂಡಿಯಾ ಹಂಗಾಮಿ ಸಿಇಒ ಹಾಂಗ್ ಕ್ಸುಕ್ವಾನ್ ಅಲಿಯಾಸ್ ಟೆರ್ರಿ, ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ) ಹರಿಂದರ್ ದಹಿಯಾ ಮತ್ತು ಸಲಹೆಗಾರ ಹೇಮಂತ್ ಮುಂಜಾಲ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಾಲ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಮೊಬೈಲ್ ಕಂಪನಿ ಲಾವಾ ಇಂಟರ್‌ನ್ಯಾಶನಲ್‌ನ ಎಂಡಿ ಹರಿ ಓಂ ರೈ, ಚೀನಾದ ಗುವಾಂಗ್ವೆನ್ ಅಲಿಯಾಸ್ ಆಂಡ್ರ್ಯೂ ಕುವಾಂಗ್ ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಾದ ನಿತಿನ್ ಗಾರ್ಗ್ ಮತ್ತು ರಾಜನ್ ಮಲಿಕ್ ಎಂಬ ನಾಲ್ಕು ಜನರನ್ನು ಜಾರಿ ನಿರ್ದೇಶನಾಲಯ ಈ ಹಿಂದೆ ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.