ಸಂಚಾರಿ ನಿಯಮ ಉಲ್ಲಂಘನೆ ನಂತ್ರ ದಂಡ ತುಂಬಲು ಕೋರ್ಟ್ ಗೆ ಹೋಗಬೇಕಾಗಿಲ್ಲ. ಶೀಘ್ರದಲ್ಲಿಯೇ ಇ-ಕೋರ್ಟ್ ಸೌಲಭ್ಯ ಶುರುವಾಗಲಿದೆ. ಇದ್ರ ನಂತ್ರ ನೀವು ಮನೆಯಲ್ಲೇ ಕುಳಿತು ದಂಡ ಪಾವತಿಸಬಹುದು.
ಕೇಂದ್ರ ಸರ್ಕಾರ ಇದಕ್ಕಾಗಿ 1,142 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ನಿಧಿಯನ್ನು 25 ರಾಜ್ಯಗಳಿಗೆ ವಿಂಗಡಿಸಲಾಗಿದೆ. ಜುಲೈ 2021ರ ವೇಳೆಗೆ ಇ-ಕೋರ್ಟ್ ಶುರುವಾಗುವ ಸಾಧ್ಯತೆಯಿದೆ. ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂಬತ್ತು ಇ-ಕೋರ್ಟ್‌ಗಳನ್ನು ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾಗಿದೆ. ಜನವರಿ 20ರವರೆಗೆ ಈ ರಾಜ್ಯಗಳಲ್ಲಿ 41 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ಇ-ಕೋರ್ಟ್‌ಗಳನ್ನು ತೆರೆಯಲಾಗಿದೆ. ಕೊರೊನಾ ಸಂದರ್ಭದಲ್ಲಿ ಇ-ಕೋರ್ಟ್ ನಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆ ಹೆಚ್ಚಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ರೆ ವಾಹನ ಮಾಲೀಕರಿಗೆ ಪೋರ್ಟಲ್‌ನಿಂದ ಸಂದೇಶ ಕಳುಹಿಸಲಾಗುತ್ತದೆ. ಈ ಲಿಂಕ್ ಮೂಲಕ 24 ಗಂಟೆಗಳ ಒಳಗೆ ಚಲನ್ ಪಾವತಿ ಮಾಡಬಹುದು. ಹಣ ಪಾವತಿಸಿದ ತಕ್ಷಣವೇ ನಿಮಗೆ ರಶೀದಿ ಸಿಗುತ್ತದೆ.