ಹಬ್ಬದ ಮಾರಾಟದ ಸಂದರ್ಭದಲ್ಲಿ ಇ ಕಾಮ್ ಎಕ್ಸ್ ಪ್ರೆಸ್ 30 ಸಾವಿರ ತಾತ್ಕಾಲಿಕ ಉದ್ಯೋಗಿಗಳ ನೇಮಕಾತಿ ಮಾಡಿಕೊಳ್ಳಲಿದೆ.
ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಮಾರಾಟ, ವ್ಯವಹಾರದ ನಿರೀಕ್ಷೆಯಲ್ಲಿರುವ ಇ-ಕಾಮರ್ಸ್ ಕಂಪನಿಗಳು ನೇಮಕಾತಿ ಮಾಡಿಕೊಳ್ಳುತ್ತವೆ. ಇ ಕಾಮ್ ಮುಂದಿನ ಕೆಲವು ವಾರಗಳಲ್ಲಿ 30 ಸಾವಿರ ನೇಮಕಾತಿ ಮಾಡಿಕೊಳ್ಳಲಿದೆ. ಕೊರೋನಾಗಿಂತ ಮೊದಲು 23,000 ಉದ್ಯೋಗಿಗಳನ್ನು ಹೊಂದಿದ್ದ ಕಂಪನಿ ಲಾಕ್ಡೌನ್ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಆನ್ಲೈನ್ ಮಾರಾಟ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ 7500 ಜನರನ್ನು ನೇಮಿಸಿಕೊಂಡಿದೆ.
ಔಷಧ, ದಿನಸಿ ಮೊದಲಾದವುಗಳನ್ನು ಪಡೆಯಲು ಹೆಚ್ಚಿನ ಸಂಖ್ಯೆಯ ಜನ ಇ-ಕಾಮರ್ಸ್ ಗಳತ್ತ ಮುಖಮಾಡಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಇ ಕಾಮ್ ಎಕ್ಸ್ ಪ್ರೆಸ್ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ 30,000 ತಾತ್ಕಾಲಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಇ ಕಾಮ್ ಎಕ್ಸ್ ಪ್ರೆಸ್ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ದೀಪ್ ಸಿಂಗ್ಲಾ ಹೇಳಿದ್ದಾರೆ.
ಆಗಸ್ಟ್ ಆರಂಭದಲ್ಲಿ ಉದ್ಯೋಗಿಗಳ ಸಂಖ್ಯೆ 30,500 ರಷ್ಟು ಇತ್ತು. ಕಳೆದ ವರ್ಷ ಹಬ್ಬದ ಸೀಸನ್ ಗೆ ಮೊದಲು 20 ಸಾವಿರ ಜನರನ್ನು ನೇಮಿಸಿಕೊಳ್ಳಲಾಗಿದೆ. ಇದು ತಾತ್ಕಾಲಿಕ ನೇಮಕಾತಿಯಾಗಿದ್ದರೂ ಬೇಡಿಕೆಯ ಅನುಸಾರ ಮೂರನೇ ಒಂದು ಭಾಗದಷ್ಟು ಜನ ಉದ್ಯೋಗಿಗಳು ಮುಂದುವರೆಲಿದ್ದಾರೆ ಎಂದು ಅವರು ಹೇಳುತ್ತಾರೆ.