ಕೊರೊನಾ ಬಂದ ಬಳಿಕ ವಿಶ್ವವೇ ತತ್ತರಿಸಿದ್ದು, ಭಾರತವೂ ಇದರಿಂದ ಹೊರತಾಗಿಲ್ಲ.
ಲಕ್ಷಾಂತರ ಜನರಿಗೆ ಸೋಂಕು ತಗುಲಿ, ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಅದರ ನಡುವೆಯೇ ಬದುಕು ಕಟ್ಟಿಕೊಳ್ಳುವ ಸವಾಲನ್ನೂ ಎದುರಿಸುತ್ತಿದ್ದೇವೆ.
ಕೆಲಸ ಕಳೆದುಕೊಂಡು, ಪಟ್ಟಣದಿಂದ ಹಳ್ಳಿಗಳತ್ತ ವಲಸೆ ಹೋಗುವರ ಸಂಖ್ಯೆ ಹೆಚ್ಚಾಗಿದೆ. ಕಡಿಮೆ ಸಂಬಳಕ್ಕೆ ದುಡಿಯುವ ಅನಿವಾರ್ಯತೆ ಬಂದಿದೆ. ಕುಶಲಕಲೆಯಿಂದ ಹಿಡಿದು ಅನೇಕ ವಲಯದ ಕೆಲಸ-ಕಾರ್ಯಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿರುವ ಕರೆಯಂತೆ ಆತ್ಮನಿರ್ಭರ ಭಾರತಕ್ಕೆ ಜನರೂ ಕೈಜೋಡಿಸುತ್ತಿದ್ದು, ತಂತಮ್ಮ ಕ್ಷೇತ್ರದಲ್ಲೇ ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಏನೇನು ಮಾಡಬಹುದು ಎಂದು ಆವಿಷ್ಕಾರಯುತ ಚಿಂತನೆಗಳು ನಡೆಯುತ್ತಿವೆ.
ಬಿಹಾರದ ಮಧುಬನಿ ಕಲಾವಿದ ರೇಮಂತ್ ಕುಮಾರ್ ಮಿಶ್ರಾ ಹತ್ತಿಯ ಮಾಸ್ಕ್ ಗಳ ಮೇಲೆ ಮಧುಬನಿಯ ಚಿತ್ತಾರಗಳನ್ನು ಕೈನಲ್ಲೇ ಅರಳಿಸಿದ್ದು, ಕುಶಲಕಲೆಯ ಮಾಸ್ಕ್ ಗಳಿಗೆ ಬೇಡಿಕೆ ಬಂದಿದೆ.