ವಿದ್ಯೆಗೆ ತಕ್ಕ ಉದ್ಯೋಗ ಸಿಗೋದು ಸುಲಭದ ಮಾತಲ್ಲ. ಎಲ್ಲರಿಗೂ ಅರ್ಹತೆಗೆ ತಕ್ಕ ಉದ್ಯೋಗ ಸಿಗುವುದಿಲ್ಲ. ಹೊಟ್ಟೆ ಪಾಡಿಗೆ ಉನ್ನತ ಶಿಕ್ಷಣ ಪಡೆದವರೂ ಕಡಿಮೆ ವಿದ್ಯಾರ್ಹತೆಯ ನೌಕರಿ ಮಾಡ್ತಾರೆ.
ಹಾಗೆ ಎಲ್ಲ ಬ್ಯುಸಿನೆಸ್ ಗೂ ತುಂಬಾ ಬಂಡವಾಳ ಬೇಕು ಎಂಬ ನಿಯಮವಿಲ್ಲ. ಕಡಿಮೆ ಬಂಡವಾಳ ಹೂಡಿ ಹೆಚ್ಚು ಹಣಗಳಿಸುವ ಬ್ಯುಸಿನೆಸ್ ಕೂಡ ಸಾಕಷ್ಟಿದೆ.
ವ್ಯಾಪಾರ ಶುರುಮಾಡಲು ಹಣದ ಜೊತೆ ಪ್ಲಾನ್ ಬೇಕು. ಕೇವಲ 1 ಲಕ್ಷ ರೂಪಾಯಿ ಬಂಡವಾಳ ಹೂಡಿ ವ್ಯವಹಾರ ಶುರುಮಾಡಬಹುದು. ಈ ವ್ಯಾಪಾರಕ್ಕೆ ಸರ್ಕಾರ ಕೂಡ ಸಹಾಯ ಮಾಡಲಿದೆ. ತೆರಿಗೆ, ಸಂಬಳ ಸೇರಿದಂತೆ ಎಲ್ಲ ಖರ್ಚು ಕಳೆದೂ ನೀವು ಪ್ರತಿ ತಿಂಗಳು 35 ಸಾವಿರ ರೂಪಾಯಿ ಲಾಭ ಪಡೆಯಬಹುದಾಗಿದೆ.
ಬಿಸ್ಕಿಟ್, ಕೇಕ್, ಚಿಪ್ಸ್, ಬ್ರೆಡ್ ತಯಾರಿಸಿ ನೀವು ಕೈತುಂಬಾ ಕೆಲಸ ಹಾಗೂ ಲಾಭ ಗಳಿಸಬಹುದು. ಬೇಕರಿ ವಸ್ತುಗಳಿಗೆ ಯಾವಾಗ್ಲೂ ಬೇಡಿಕೆ ಇದ್ದೇ ಇರುತ್ತದೆ.
ಇದಕ್ಕೆ ಬೇಕಾಗುವ ಹಿಟ್ಟು, ಮೈದಾ, ಸಕ್ಕರೆ, ಹಾಲು, ಬಣ್ಣ, ತುಪ್ಪ, ಉಪ್ಪು ಎಲ್ಲವೂ ಎಲ್ಲ ಕಡೆ ಸಿಗುತ್ತದೆ. ಬಾಡಿಗೆ, ದೂರವಾಣಿ, ಕಾರ್ಮಿಕರ ಸಂಬಳ, ಪ್ಯಾಕಿಂಗ್ ಗೆ 1.86 ಲಕ್ಷ ರೂಪಾಯಿ ಅಂದಾಜು ಖರ್ಚಾಗುತ್ತದೆ. ಸ್ಥಿರ ಬಂಡವಾಳ ಅಂದ್ರೆ ಯಂತ್ರೋಪಕರಣಗಳಿಗೆ 3.5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಒಟ್ಟು 5.36 ಲಕ್ಷ ರೂಪಾಯಿ ಆರಂಭದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ.
ಇದಕ್ಕೆ ನೀವು 90 ಸಾವಿರ ರೂಪಾಯಿಯನ್ನು ನೀಡಬೇಕು. ಬ್ಯಾಂಕ್ ಟರ್ಮ್ ಲೋನ್ ರೂಪದಲ್ಲಿ 2.97 ಲಕ್ಷ ಹಾಗೂ ಕಾರ್ಮಿಕರ ಸಾಲವಾಗಿ 1.49 ಲಕ್ಷ ರೂಪಾಯಿ ನೀಡುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯಲ್ಲಿ ಹೆಸರು, ವಿಳಾಸ, ವ್ಯಾಪಾರ, ಸಾಲದ ಹಣ ಸೇರಿದಂತೆ ಎಲ್ಲ ವಿಷ್ಯವನ್ನು ನಮೂದಿಸಬೇಕು. ಇದಕ್ಕೆ ಗ್ಯಾರಂಟಿ ಅವಶ್ಯಕತೆಯಿಲ್ಲ. ಐದು ವರ್ಷದಲ್ಲಿ ನೀವು ಸಾಲ ತೀರಿಸಬಹುದು.