alex Certify 20 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ ಗಳಿಸಿ ಲಕ್ಷಾಂತರ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ ಗಳಿಸಿ ಲಕ್ಷಾಂತರ ರೂ.

सिर्फ 20 हजार में शुरू करें इस प्लांट का बिजनेस, हर महीने होगी लाख रुपये से  ज्यादा की कमाई - Earn money with Bonsai Plant business and get more than 1  lakh

ಬೊನ್ಸಾಯ್ ಗಿಡವನ್ನು ಗುಡ್ ಲಕ್ ಗಿಡವೆಂದೇ ಪರಿಗಣಿಸಲಾಗ್ತಿದೆ. ಇದೇ ಕಾರಣಕ್ಕೆ ಮನೆಗಳಲ್ಲಿ ಈ ಗಿಡವನ್ನು ಇಡಲಾಗ್ತಿದೆ. ಅದೃಷ್ಟದ ಗಿಡ ಎಂದೇ ಹೆಸರಾಗಿರುವ ಈ ಗಿಡ ನಿಮ್ಮ ಅದೃಷ್ಟವನ್ನೂ ಬದಲಿಸಬಲ್ಲದು. ಬೊನ್ಸಾಯಿ ಗಿಡ ಬೆಳೆಸುವ ಮೂಲಕ ನೀವು ಲಕ್ಷಾಂತರ ರೂಪಾಯಿ ಗಳಿಸಬಹುದು.

ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರದಲ್ಲೂ ಸ್ಥಾನ ಪಡೆದಿರುವ ಈ ಗಿಡದ ಕೃಷಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಈ ವ್ಯವಹಾರವನ್ನು ನೀವು 20 ಸಾವಿರ ರೂಪಾಯಿಗೂ ಶುರು ಮಾಡಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆರಂಭದಲ್ಲಿ ಹೂಡಿಕೆ ಮಾಡಿ.

ಮೊದಲೇ ಹೇಳಿದಂತೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಮನೆ ಹಾಗೂ ಕಚೇರಿ ಎರಡರಲ್ಲೂ ಇದನ್ನು ಇಡಲಾಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಗಿಡದ ಬೆಲೆ 250 ರೂಪಾಯಿಯಿಂದ 2500 ರೂಪಾಯಿವರೆಗಿದೆ. ಬೊನ್ಸಾಯಿ ಇಷ್ಟಪಡುವ ಜನರು ಹೆಚ್ಚು ಬೆಲೆ ತೆರಲು ಸಿದ್ಧರಿರ್ತಾರೆ. ಮನೆಯಲ್ಲಿಯೇ ಗಿಡ ಬೆಳೆಸುವ ಆಲೋಚನೆಯಲ್ಲಿದ್ದರೆ ನೀವು ಗಳಿಕೆಗೆ ಕಾಯಬೇಕು. ಗಿಡ ಬೆಳೆಯಲು ಎರಡರಿಂದ ಐದು ವರ್ಷಗಳು ಬೇಕಾಗುತ್ತವೆ. ನರ್ಸರಿಯಲ್ಲಿ ಸಿದ್ಧವಿರುವ ಗಿಡವನ್ನು ತಂದು ನೀವು ಶೇಕಡಾ 30-50ರಷ್ಟು ಬೆಲೆ ಹೆಚ್ಚಿಸಿ ಮಾರಾಟ ಮಾಡಬಹುದು.

ಮೂರು ವರ್ಷಗಳಲ್ಲಿ ಪ್ರತಿ ಸಸ್ಯಕ್ಕೆ ಸರಾಸರಿ 240 ರೂಪಾಯಿ ವೆಚ್ಚವಾಗುತ್ತದೆ. ಸರ್ಕಾರ 120 ರೂಪಾಯಿಗಳ ನೆರವು ನೀಡುತ್ತದೆ. ಇದು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಿದೆ. ಹೆಕ್ಟೇರ್‌ಗೆ 1500 ರಿಂದ 2500 ಸಸ್ಯಗಳನ್ನು ನೆಡಬಹುದು. 3 x 2.5 ಮೀಟರ್ ಎತ್ತರದಲ್ಲಿ ಒಂದು ಗಿಡವನ್ನು ನೆಟ್ಟರೆ, ಒಂದು ಹೆಕ್ಟೇರ್‌ನಲ್ಲಿ ಸುಮಾರು 1500 ಸಸ್ಯಗಳನ್ನು ನೆಡಬಹುದು. ಎರಡು ಸಸ್ಯಗಳ ನಡುವೆ ಉಳಿದಿರುವ ಜಾಗದಲ್ಲಿ ಎರಡನೇ ಬೆಳೆ ಬೆಳೆಯಬಹುದು. 4 ವರ್ಷಗಳ ನಂತರ 3 ರಿಂದ 3.5 ಲಕ್ಷ ರೂಪಾಯಿಗಳನ್ನು ಗಳಿಸಲು ಪ್ರಾರಂಭಿಸುತ್ತೀರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...