![](https://kannadadunia.com/wp-content/uploads/2021/02/627116-bhim-app-091517-1024x576.jpg)
ಭೀಮ್ ಅಪ್ಲಿಕೇಷನ್ ಮೂಲಕವೂ ಹಣ ಗಳಿಸಬಹುದು. ಭೀಮ್ ಅಪ್ಲಿಕೇಷನ್ ಮೂಲಕ ಹಣ ಗಳಿಸಲು ನೀವು ಆಸಕ್ತರಾಗಿದ್ದರೆ ಇದನ್ನು ಓದಿ.
ಆನ್ಲೈನ್ ಮೂಲ ಹಣ ವರ್ಗಾವಣೆ ಮಾಡಲು ಸಾಕಷ್ಟು ಅಪ್ಲಿಕೇಷನ್ ಗಳು ಲಭ್ಯವಿದೆ. ಇಂಥ ವೆಬ್ಸೈಟ್ ಗಳು ನಿಮ್ಮ ಕೆಲಸವನ್ನು ಸುಲಭಗೊಳಿಸಿವೆ. ಹಣ ವರ್ಗಾವಣೆ ಮಾಡುವ ಅಪ್ಲಿಕೇಷನ್ ಗಳಲ್ಲಿ ಭೀಮ್ ಅಪ್ಲಿಕೇಷನ್ ಕೂಡ ಒಂದು.
ಭೀಮ್ ಯುಪಿಐ ಆಧಾರಿತ ಅಪ್ಲಿಕೇಷನ್ ಆಗಿದೆ. ಇದ್ರ ಪೂರ್ಣ ಹೆಸರು ಭಾರತ್ ಇಂಟರ್ಫೇಸ್ ಫಾರ್ ಮನಿ, ಮೊಬೈಲ್ ಸ್ಟೋರ್ ನಲ್ಲಿ ಭೀಮ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅದಕ್ಕೆ ಮೊಬೈಲ್ ನಂಬರ್ ಹಾಕಬೇಕು. ಬ್ಯಾಂಕ್ ಅಕೌಂಟ್ ನಂಬರ್ ಮಾಹಿತಿ ಹಾಕಬೇಕು. ಒಮ್ಮೆ ಅಕೌಂಟ್ ಲಿಂಕ್ ಆದ್ಮೇಲೆ ಆನ್ಲೈನ್ ವರ್ಗಾವಣೆಯನ್ನು ಸುಲಭವಾಗಿ ಮಾಡಬಹುದು.
ಭೀಮ್ ಅಪ್ಲಿಕೇಷನ್ ಗೆ ಸೈನ್ ಅಪ್ ಆದ್ಮೇಲೆ ವಿಪಿಎ ಪ್ರಾಪ್ತವಾಗುತ್ತದೆ. ಇದು ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಮೇಲೆ ಆಧಾರಿತವಾಗಿರುತ್ತದೆ. ಭೀಮ್ ಅಪ್ಲಿಕೇಷನ್ ಬಳಕೆದಾರರಿಗೆ ಕ್ಯಾಶ್ಬ್ಯಾಕ್ ನೀಡಲಾಗುತ್ತದೆ. ಬಿಲ್ ಪಾವತಿ, ಹಣ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತದೆ. ವಾರಕ್ಕೆ 750 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಬಹುದು. ವ್ಯಾಪಾರಿಗಳಿಗೆ 1000 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗುತ್ತದೆ. ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಮೊದಲ ಬಾರಿ ಹಣ ವರ್ಗಾವಣೆ ಮಾಡಿದ್ರೆ 51 ರೂಪಾಯಿ ವೆಲ್ ಕಂ ಗಿಫ್ಟ್ ರೂಪದಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತದೆ.
ಈ ಅಪ್ಲಿಕೇಷನ್ ಸ್ನೇಹಿತರಿಗೆ ಕಳುಹಿಸುವ ಮೂಲಕ ಕೂಡ ನೀವು ಗಳಿಸಬಹುದು. ನೀವು ಕಳುಹಿಸಿದ ಲಿಂಕ್ ಓಪನ್ ಮಾಡಿ ಸ್ನೇಹಿತರು ಭೀಮ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ್ರೆ ನಿಮಗೆ 10 ರೂಪಾಯಿ ಸಿಗುತ್ತದೆ. ಪ್ರತಿ ದಿನ 20 ಮಂದಿ ಇನ್ಸ್ಟಾಲ್ ಮಾಡಿದ್ರೆ ನಿಮಗೆ 200 ರೂಪಾಯಿ ಸಿಗುತ್ತದೆ. ತಿಂಗಳ ವರ್ಗಾವಣೆ ಆಧಾರದ ಮೇಲೂ ಕ್ಯಾಶ್ಬ್ಯಾಕ್ ಸಿಗುತ್ತದೆ. ಬಳಕೆದಾರರು ತಿಂಗಳಿಗೆ 20ಕ್ಕಿಂತ ಹೆಚ್ಚು ವಹಿವಾಟನ್ನು ಅಪ್ಲಿಕೇಷನ್ ಮೂಲಕ ನಡೆಸಿದ್ದರೆ 100 ರೂಪಾಯಿ ಕ್ಯಾಶ್ಬ್ಯಾಕ್ ಸಿಗುತ್ತದೆ. 100 ಕ್ಕಿಂತ ಕಡಿಮೆಯಿದ್ದರೆ 200 ರೂಪಾಯಿ ಹಾಗೂ ತಿಂಗಳಿಗೆ 100ಕ್ಕಿಂತ ಹೆಚ್ಚು ವಹಿವಾಟಿಗೆ 250 ರೂಪಾಯಿ ಕ್ಯಾಶ್ಬ್ಯಾಕ್ ಸಿಗುತ್ತದೆ.