ಮನೆಯಲ್ಲಿ ಕುಳಿತು ಕೈತುಂಬ ಹಣ ಗಳಿಸಲು ಎಲ್ಲರೂ ಬಯಸ್ತಾರೆ. ಈಗಾಗಲೇ ಕೆಲವರು ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಕುಳಿತು ಆನ್ಲೈನ್ ನಲ್ಲಿ ಕೆಲಸ ಪಡೆಯುವುದು ಹೇಗೆ…? ಯಾವ ಯಾವ ಸೈಟ್ ಗಳು ಕೆಲಸ ನೀಡುತ್ತವೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅಂಥವರಿಗೆ ಇಲ್ಲಿ ಕೆಲವೊಂದಿಷ್ಟು ಸೈಟ್ ಗಳ ಮಾಹಿತಿಯಿದೆ.
Udemy : ಈ ವೆಬ್ಸೈಟ್ ಕೂಡ ಯುಟ್ಯೂಬ್ ನಂತೆ ಇರುತ್ತದೆ. ಆದ್ರೆ ಈ ಸೈಟ್ ನಲ್ಲಿ ಟ್ಯುಟೋರಿಯಲ್ ವಿಡಿಯೋಗಳನ್ನು ಮಾತ್ರ ನೋಡಬಹುದಾಗಿದೆ. ಇಲ್ಲಿ ವಿಡಿಯೋ ವೀಕ್ಷಣೆ ಮಾಡಲು ಹಣ ಪಾವತಿ ಮಾಡಬೇಕಾಗುತ್ತದೆ. ನೀವೂ ಕೂಡ ಈ ಸೈಟ್ ನಲ್ಲಿ ಸಲಹೆಗಳನ್ನು, ಮಾಹಿತಿಗಳನ್ನು ನೀಡುವ ವಿಡಿಯೋ ಹಾಕಿ ಹಣ ಗಳಿಸಬಹುದು.
Amazon : ಅಮೆಜಾನ್ ನಲ್ಲಿಯೂ ಗಳಿಕೆ ಅವಕಾಶವಿದೆ. ಆಪಲ್ಟ್ ಪ್ರೋಗ್ರಾಂ ನಲ್ಲಿ ನಿಮಗೆ ಗಳಿಕೆಗೆ ಅವಕಾಶ ಸಿಗುತ್ತದೆ. ನೀವು ಮೊದಲು ಆಪಲ್ಟ್ ಪ್ರೋಗ್ರಾಂಗೆ ಸೇರಬೇಕು. ನಂತ್ರ ನಿರ್ದಿಷ್ಟ ಸರಕುಗಳ ಲಿಂಕ್ ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಹಾಕಬೇಕು. ನೀವು ಹಾಕಿದ ಲಿಂಕ್ ಮೇಲೆ ಬೇರೆಯವರು ಕ್ಲಿಕ್ ಮಾಡಿ ಖರೀದಿ ಮಾಡಿದಾಗ ನಿಮ್ಮ ಖಾತೆಗೆ ಹಣ ಬರುತ್ತದೆ.
Fiverr : ಇದು ಕೂಡ ಗಳಿಕೆಗೆ ಒಂದು ಒಳ್ಳೆ ಸೈಟ್. ಈ ವೆಬ್ ಸೈಟ್ ನಲ್ಲಿ ನೀವು ಡಿಸೈನ್, ವಿಡಿಯೋ ಎಡಿಟಿಂಗ್, ಫೋಟೋಶಾಪ್ ಹಾಗೂ ಬರವಣಿಗೆ ಕೆಲಸವನ್ನು ಮಾಡಬಹುದು.
ಆನ್ಲೈನ್ ಶಾಪಿಂಗ್ : ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗ್ತಿದೆ. ಆನ್ಲೈನ್ ನಲ್ಲಿ ಬಟ್ಟೆ, ಆಭರಣ ಸೇರಿದಂತೆ ಎಲ್ಲ ವಸ್ತುಗಳ ಮಾರಾಟ ಜೋರಾಗಿದೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಹಾಗೂ ವಾಟ್ಸಾಪ್ ಇದಕ್ಕೆ ಸಂಪೂರ್ಣ ಬಳಕೆಯಾಗ್ತಿದೆ. ದೊಡ್ಡ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಆನ್ಲೈನ್ ನಲ್ಲಿ ಇವುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು.