ನಿಮ್ಮ ಬಳಿ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಇದ್ರೆ ನೀವೂ ಸುಲಭವಾಗಿ ಹಣ ಗಳಿಸಬಹುದು. ಇದಕ್ಕಾಗಿ ಹೊರಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲಿ ಕುಳಿತು ಸುಲಭವಾಗಿ ಸಂಪಾದನೆ ಮಾಡಬಹುದು. ಈ ಕೆಳಗಿನ ಐದು ಕೆಲಸಗಳಲ್ಲಿ ಒಂದು ಕೆಲಸ ಶುರು ಮಾಡಿ ದಿನಕ್ಕೆ 1000 ರೂಪಾಯಿ ಗಳಿಸಬಹುದು. ಇಂಟರ್ನೆಟ್ ಬಗ್ಗೆ ಸ್ವಲ್ಪ ಜ್ಞಾನವಿದ್ರೆ ಸಾಕು.
ಮನೆಯಲ್ಲಿಯೇ ನೀವು ಕಾಲ್ ಸೆಂಟರ್ ಏಜೆಂಟ್ ಆಗಿ ಕೆಲಸ ಮಾಡಬಹುದು. LiveOps.com ನಿಮಗೆ ಈ ಸೌಲಭ್ಯ ನೀಡ್ತಿದೆ. ಈ ನೆಟ್ ನಲ್ಲಿ ಕಂಪನಿ ಏಜೆಂಟ್ ಹೇಗಾಗುವುದು ಎನ್ನುವುದ್ರ ಮಾಹಿತಿ ಸಿಗಲಿದೆ. ಇಂಗ್ಲೀಷ್ ಉತ್ತಮವಾಗಿದ್ದರೆ ಕೆಲಸ ಮತ್ತಷ್ಟು ಸುಲಭ. ಇಂಗ್ಲೀಷ್ ಬರದೆ ಹೋದಲ್ಲಿ ಕಂಪನಿ ಕಂಪ್ಯೂಟರ್ ಸ್ಕ್ರೀನ್ ಮೇಲೆ ಏನು ಹೇಳಬೇಕೆಂಬುದನ್ನು ಬರೆಯುತ್ತದೆ. ಅದನ್ನು ಹೇಳಿದ್ರೆ ಆಯ್ತು. ಒಂದು ಗಂಟೆಗೆ 7 ರಿಂದ 15 ಡಾಲರ್ ಗಳಿಕೆ ಮಾಡಬಹುದಾಗಿದೆ.
http://www.swagbucks.com ಒಂದು ಪ್ರಸಿದ್ಧ ವೆಬ್ಸೈಟ್. ಉಚಿತವಾಗಿ ಲಾಗ್ ಇನ್ ಆಗುವ ವ್ಯವಸ್ಥೆ ಇದ್ರಲ್ಲಿದೆ. ಫೇಸ್ಬುಕ್ ಮೂಲಕ ಕೂಡ ಇದ್ರಲ್ಲಿ ಕೆಲಸ ಮಾಡಬಹುದು. ಇದ್ರಲ್ಲಿ ನಿಮಗೆ ಹಣ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಆದ್ರೆ ಮೊಬೈಲ್, ಹಾರ್ಡ್ ಡಿಸ್ಕ್, ಟೀಶರ್ಟ್ ನಂತಹ ವಸ್ತುಗಳು ಹೆಚ್ಚೆಚ್ಚು ಸಿಗುತ್ತವೆ.
ಆನ್ಲೈನ್ ಕೆಲಸ ಈಗ ಸಾಮಾನ್ಯವಾಗಿದೆ. ಆದ್ರೆ ಕೆಲ ಕಂಪನಿಗಳು ದುಡಿಸಿಕೊಂಡು ಹಣ ನೀಡುವುದಿಲ್ಲ. ಆದ್ರೆ www.odesk.com ಮತ್ತು www.elance.com ನಂಬಿಕಸ್ತ ವೆಬ್ಸೈಟ್ ಗಳಾಗಿವೆ. ಒಮ್ಮೆ ಇದ್ರಲ್ಲಿ ಹೆಸರು ನೋಂದಾಯಿಸಿದ್ರೆ ನಂತ್ರ ಬೇರೆ ಬೇರೆ ವಿಧಗಳ ಮೂಲಕ ನೀವು ಹಣ ಸಂಪಾದನೆ ಮಾಡಬಹುದಾಗಿದೆ.
ಬರವಣಿಗೆ ಹವ್ಯಾಸವಿದ್ರೆ ಇದ್ರಿಂದಲೂ ನೀವು ಗಳಿಕೆ ಮಾಡಬಹುದು. ಕಥೆ, ಪುಸ್ತಕ ಬರೆದು ಯಾರು ಪ್ರಕಟಣೆ ಮಾಡ್ತಾರೆಂದು ಕಾಯುವ ತೊಂದರೆಯಿಲ್ಲ. ಅಮೆಜಾನ್ ಕಿಂಡಲ್ ನೇರವಾಗಿ ಪ್ರಕಟಣೆಗೆ ಅವಕಾಶ ನೀಡಿದೆ. ಪುಸ್ತಕ ಪ್ರಕಟಿಸಿ ಅಮೆಜಾನ್ ಕಿಂಡಲ್ ಗೆ ಹಾಕಿದ್ರೆ ಮುಗೀತು. ನಿಮ್ಮ ಪುಸ್ತಕ ಖರೀದಿಯಾದಲ್ಲಿ ಶೇಕಡಾ 70 ರಷ್ಟು ಹಣ ನಿಮ್ಮ ಕೈ ಸೇರುತ್ತದೆ. ಇದ್ರ ಬಗ್ಗೆ https://kdp.amazon.com/ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ.
ಸಾಫ್ಟ್ವೇರ್ ಅಥವಾ ಇತರ ವಸ್ತುಗಳ ಮೇಲೆ ವಿಮರ್ಶೆ ಬರೆಯುವುದು. ಉತ್ತಮ ಬರವಣೆಗೆಕಾರರಿಗೆ ಇದೊಂದು ಒಳ್ಳೆ ಅವಕಾಶ. Vindale Research,ExpoTv.com ನಿಮಗೆ ವಿಮರ್ಶೆ ನೀಡಿ ಗಳಿಕೆಗೆ ಅವಕಾಶ ಮಾಡಿಕೊಡ್ತಿದೆ.