ಅಂಚೆ ಕಚೇರಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ. ಇದ್ರಲ್ಲಿ ತೆರಿಗೆ ಉಳಿಸಬಹುದು. ಅಂಚೆ ಕಚೇರಿಯ ಈ ಯೋಜನೆಯಲ್ಲಿ ವಿಮಾ ಪಾಲಿಸಿ ಸೇರಿದಂತೆ ಅನೇಕ ಸೌಲಭ್ಯಗಳು ಲಭ್ಯವಿದೆ. ಯೋಜನೆ ಮುಕ್ತಾಯದ ನಂತರ ಒಟ್ಟಿಗೆ 7.25 ಲಕ್ಷ ರೂಪಾಯಿ ಗ್ರಾಹಕನ ಕೈಗೆ ಸಿಗುತ್ತದೆ.
ಅಂಚೆ ಕಚೇರಿಯ ಈ ವಿಶೇಷ ಯೋಜನೆಯ ಹೆಸರು ಪೋಸ್ಟ್ ಆಫೀಸ್ ಗ್ರಾಮ ಪ್ರಿಯಾ ಯೋಜನೆ. ಭಾರತದ ವಿಮಾ ಪರಿಸ್ಥಿತಿಯನ್ನು ಸುಧಾರಿಸುವ ಶಿಫಾರಸಿನಂತೆ ಮಲ್ಹೋತ್ರಾ ಸಮಿತಿಯು ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಭಾರತದ ವಿವಿಧ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲಾಗಿದೆ. ಈ ಯೋಜನೆಯನ್ನು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 45 ವರ್ಷ ವಯಸ್ಸಿನ ವ್ಯಕ್ತಿ ತೆಗೆದುಕೊಳ್ಳಬಹುದು.
ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಬಯೋ ಬಬಲ್ ಐಡಿಯಾ
ಈ ಯೋಜನೆಯಲ್ಲಿ ಪ್ರತಿ ತಿಂಗಳು 5042 ರೂಪಾಯಿಗಳ ಪ್ರೀಮಿಯಂ ಠೇವಣಿ ಮಾಡಿದರೆ, ಯೋಜನೆಯ ಮುಕ್ತಾಯದ ನಂತರ 7.25 ಲಕ್ಷ ರೂಪಾಯಿ ಸಿಗುತ್ತದೆ. ಯೋಜನೆಯ ಅವಧಿ 10 ವರ್ಷಗಳು. ಇದು ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯಡಿ ಬರಲಿದೆ. ಅಂಚೆ ಕಚೇರಿ ಗ್ರಾಮ ಪ್ರಿಯಾ ಯೋಜನೆಯಲ್ಲಿ ವಾರ್ಷಿಕ ಒಟ್ಟು 45 ಸಾವಿರ ರೂಪಾಯಿಗಳ ಬೋನಸ್ ನೀಡಲಾಗುತ್ತದೆ. 10 ವರ್ಷಗಳಲ್ಲಿ ಈ ಮೊತ್ತ 2,25,000 ರೂಪಾಯಿಯಾಗಲಿದೆ.