ಮುಂಬೈ: ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಗಳು ಸ್ಕೂಟರ್ ಜತೆ ಮಾರಾಟ ಮಾಡಿದ್ದ ಚಾರ್ಜರ್ ನ ಸಂಪೂರ್ಣ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಮುಂದಾಗಿವೆ.
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳು ಗ್ರಾಹಕರಿಗೆ ಚಾರ್ಜರ್ ಹಣ ವಾಪಸ್ ನೀಡಲು ಕ್ರಮ ಕೈಗೊಂಡಿವೆ. ಚಾರ್ಜರ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡುವುದಾಗಿ ಓಲಾ, ಆಥರ್, ಹೀರೋ ಮೋಟೊ ಕಾರ್ಪ್, ಟಿವಿಎಸ್ ಕಂಪನಿಗಳು ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾಕ್ಕೆ ಈ ಕುರಿತಾಗಿ ಮಾಹಿತಿ ನೀಡಿವೆ.
ಚಾರ್ಜರ್ ಮತ್ತು ಸಾಫ್ಟ್ವೇರ್ ಹೆಸರಿನಲ್ಲಿ ಗ್ರಾಹಕರಿಗೆ ಪ್ರತ್ಯೇಕ ಶುಲ್ಕ ವಿಧಿಸಲಾಗಿದ್ದು, ಸಾಫ್ಟ್ವೇರ್ ಅಪ್ಡೇಟ್ ಹೆಸರಿನಲ್ಲಿ ಗ್ರಾಹಕರಿಂದ ಕಂಪನಿಗಳು ಹಣ ವಸೂಲಿ ಮಾಡುತ್ತಿದ್ದವು. ಈ ಕುರಿತು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾರ್ಜರ್ ಶುಲ್ಕ ವಾಪಸ್ ನೀಡಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಗಳು ಒಪ್ಪಿಗೆ ನೀಡಿವೆ.