
ಬೆಂಗಳೂರು: ಆದಾಯ ತೆರಿಗೆ ಪಾವತಿದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಆದಾಯ ತೆರಿಗೆ ಇ – ಫೈಲಿಂಗ್ ಪೋರ್ಟಲ್ ನಲ್ಲಿ ನಲ್ಲಿನ ತಾಂತ್ರಿಕ ತೊಡಕುಗಳನ್ನು ಕಳೆದ ವಾರ ಸರಿಪಡಿಸಲಾಗಿದೆ. 1 ಲಕ್ಷ ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಿರುವುದಾಗಿ ಹೇಳಲಾಗಿದೆ.
ಇನ್ಫೋಸಿಸ್ 40 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸಿಒಒ ಪ್ರವೀಣ್ ರಾವ್ ಅವರು, ಶೀಘ್ರದಲ್ಲಿಯೇ ಉಳಿದ ತೊಂದರೆಗಳನ್ನು ನಿವಾರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದು, ಆದಷ್ಟು ಬೇಗನೆ ಆದಾಯ ತೆರಿಗೆ ಪೋರ್ಟಲ್ ದೋಷ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಾಲಿನಲ್ಲಿ ಇನ್ಫೋಸಿಸ್ ಸಹಯೋಗದಲ್ಲಿ ಆದಾಯ ತೆರಿಗೆ ಇಲಾಖೆ ಇ- ಫೈಲಿಂಗ್ ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಕೆಲವು ತಾಂತ್ರಿಕ ತೊಂದರೆ ಕಂಡುಬಂದಿದ್ದವು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೋರ್ಟಲ್ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದು, ಅದಕ್ಕಾಗಿ ನಂದನ್ ನೀಲೇಕಣಿ ವಿಷಾದ ವ್ಯಕ್ತಪಡಿಸಿದ್ದರು.