ಹೈದರಾಬಾದ್: ಮುಂದಿನ ವರ್ಷದ ಆರಂಭದಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಾಗುವುದು. ಇಂಟರ್ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಶನ್(ಐಸಿಎಐ) ಯ ಮಾನದಂಡಗಳನ್ನು ಅನುಸರಿಸಿ ಫೂಲ್ ಪ್ರೂಫ್ ಭದ್ರತೆಗಾಗಿ ಚಿಪ್ ನೊಂದಿಗೆ ಎಂಬೆಡ್ ಮಾಡಲಾದ ಎಲೆಕ್ಟ್ರಾನಿಕ್ ಪಾಸ್ಪೋರ್ಟ್ ಗಳು ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೊರತರುವ ಸಾಧ್ಯತೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಔಸಫ್ ಸಯೀದ್ ಹೇಳಿದ್ದಾರೆ.
ಹಳೆಯ ಪಾಸ್‌ಪೋರ್ಟ್‌ಗಳನ್ನು ಬದಲಿಸುವ ಇ-ಪಾಸ್‌ಪೋರ್ಟ್‌ಗಳ ಕಲ್ಪನೆಯನ್ನು ಅವರು ತಳ್ಳಿಹಾಕಿದ್ದು, ಅವುಗಳನ್ನು ಪಡೆಯುವುದು ಸ್ವಯಂಪ್ರೇರಿತವಾಗಿದೆ. ಚಿಪ್ ಪಾಸ್‌ಪೋರ್ಟ್ ಹೊಂದಿರುವವರ ವಿವರಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿರಿಸುತ್ತದೆ. ಇದು ನಕಲಿ ಪಾಸ್‌ಪೋರ್ಟ್‌ಗಳನ್ನು ಕೊನೆಗೊಳಿಸುತ್ತದೆ ಎಂದು ಹೇಳಿದರು.