ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಇ -ಕೆವೈಸಿ ನೋಂದಣಿಗೆ ನಾಳೆಯೇ ಕೊನೆಯ ದಿನವಾಗಿದೆ.
ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿಸಿಕೊಂಡ ರೈತರು ತಮ್ಮ ಇ -ಕೆವೈಸಿ ಮಾಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದ್ದು, ಇ-ಕೆವೈಸಿ ಮಾಡಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಇಲ್ಲದಿದ್ದರೆ ವಾರ್ಷಿಕ 6000 ರೂ. ಸಹಾಯಧನ ಕಡಿತವಾಗಲಿದೆ. ಪಿಎಂ ಕಿಸಾನ್ ಪೋರ್ಟಲ್ ಮೂಲಕ ಮೊಬೈಲ್ ಗೆ ಒಟಿಪಿ ಪಡೆದು ಅಥವಾ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ ಮೂಲಕ ಇ- ಕೆವೈಸಿ ಮಾಡಿಸಬಹುದಾಗಿದೆ.