ಭಾರತದಲ್ಲಿ ಅಪಘಾತದ ಸಂಖ್ಯೆ ಹೆಚ್ಚಾಗ್ತಿದೆ. ರಸ್ತೆ ಅಪಘಾತ ತಪ್ಪಿಸಿ, ಸುರಕ್ಷಿತ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗ್ತಿದೆ. ರಸ್ತೆ ಅಪಘಾತಕ್ಕೆ ಮುಖ್ಯ ಕಾರಣ, ಸಂಚಾರಿ ನಿಯಮದ ಉಲ್ಲಂಘನೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ. ಕಾಗದದ ಮೇಲೆ ಸಂಚಾರಿ ಪೊಲೀಸರು ಬರೆದ ವಿವರವನ್ನು ಚಲನ್ ಎನ್ನಲಾಗುತ್ತದೆ. ಇದ್ರಲ್ಲಿ ದಂಡದ ವಿವರವಿರುತ್ತದೆ.
ಸಂಚಾರಿ ಪೊಲೀಸರು, ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಬಹುದು. 1988ರ ಸಂಚಾರಿ ನಿಯಮ ಕಾಯ್ದೆಯಡಿ, ಸಂಚಾರಿ ಪೊಲೀಸರು ನೀಡಿದ ಚಲನ್ ಗೆ ನೀವು ದಂಡ ಪಾವತಿ ಮಾಡಬೇಕಾಗುತ್ತದೆ. ಸಂಚಾರಿ ಪೊಲೀಸರು ಹಾಗೂ ವಾಹನ ಸವಾರರ ಕೆಲಸ ಸುಲಭಗೊಳಿಸಲು ಇ-ಚಲನ್ ಜಾರಿಗೆ ತರಲಾಗಿದೆ.
ಇ-ಚಲನ್ ಎಲೆಕ್ಟ್ರಾನಿಕ್ ವ್ಯವಸ್ಥೆಯಾಗಿದೆ. ಜನರು ಕಾಗದದ ಬದಲು ಎಲೆಕ್ಟ್ರಾನಿಕ್ ಸಿಸ್ಟಂ ಮೂಲಕ ಪೊಲೀಸರಿಂದ ಚಲನ್ ಪಡೆಯುತ್ತಾರೆ. ನಿಮ್ಮ ಹೆಸರಿನಲ್ಲಿ ಇ-ಚಲನ್ ಜಾರಿಯಾಗಿದ್ದರೆ ಅದನ್ನು ಎರಡು ರೀತಿಯಲ್ಲಿ ಪಾವತಿಸಬಹುದು. ಮೊದಲನೆಯದು ಆನ್ಲೈನ್ ಮೂಲಕ ಪಾವತಿ. ಆನ್ಲೈನ್ ಮೂಲಕ ದಂಡ ಪಾವತಿಸಲು ವೆಬ್ಸೈಟ್ ರಚಿಸಲಾಗಿದೆ. ಇ-ಚಲನ್ ವೇಳೆ ಚಲನ್ ಸಂಖ್ಯೆ ನೀಡಲಾಗುತ್ತದೆ. ಆನ್ಲೈನ್ ಪಾವತಿ ವೇಳೆ ಆ ನಂಬರ್ ನಮೂದಿಸಿ ಪಾವತಿ ಮಾಡಬೇಕಾಗುತ್ತದೆ.
ಆಫ್ಲೈನ್ ನಲ್ಲಿಯೂ ಇ-ಚಲನ್ ದಂಡ ಕಟ್ಟಬಹುದು. ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದಂಡ ಪಾವತಿ ಮಾಡಬೇಕಾಗುತ್ತದೆ. ಚಲನ್ ನೀಡಿದ 60 ದಿನಗಳೊಳಗೆ ದಂಡ ಪಾವತಿ ಮಾಡಬೇಕಾಗುತ್ತದೆ. ಎಸ್ ಎಂ ಎಸ್ ಮೂಲಕ ಚಲನ್ ನಂಬರ್ ನಿಮಗೆ ಬರುತ್ತದೆ. ಒಂದು ವೇಳೆ ದಂಡ ಪಾವತಿಸಿಲ್ಲವೆಂದಾದ್ರೆ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ವಿಚಾರಣೆ ನಂತ್ರ ಹೆಚ್ಚುವರಿ ದಂಡ ಹಾಗೂ 3 ತಿಂಗಳ ಶಿಕ್ಷೆಯಾಗುವ ಸಾಧ್ಯತೆಯಿದೆ. http://echallan.parivahan.gov.in. ನಲ್ಲಿ ನೀವು ದಂಡ ಪಾವತಿಸಬೇಕು.