ನವದೆಹಲಿ: 2019 – 20 ನೇ ಹಣಕಾಸು ವರ್ಷದ GSTR -9 ಮತ್ತು GSTR -9c ಸಲ್ಲಿಕೆ ದಿನಾಂಕವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.
2019 -20 ರ ಆರ್ಥಿಕ ವರ್ಷದ ಸಿಜಿಎಸ್ಟಿ ನಿಯಮಗಳ ಪ್ರಕಾರ, 80 ನೇ ನಿಯಮದೊಂದಿಗೆ ಸೆಕ್ಷನ್ 44 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ವಾರ್ಷಿಕ ಆದಾಯವನ್ನು ನೀಡಬೇಕಾದ ದಿನಾಂಕವನ್ನು ವಿಸ್ತರಿಸಲಾಗಿದೆ.
ಈ ಮೊದಲು 2020 ರ ಡಿಸೆಂಬರ್ 31 ರಿಂದ 2021 ರ ಫೆಬ್ರವರಿ 28 ರ ವರೆಗೆ ದಿನಾಂಕ ವಿಸ್ತರಿಸಲಾಗಿತ್ತು. ತೆರಿಗೆದಾರರಿಗೆ ಆಗುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗದ ಅನುಮೋದನೆಯೊಂದಿಗೆ ದಿನಾಂಕವನ್ನು ಮತ್ತೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ದಿನಾಂಕಕ್ಕೆ ಅನುಗುಣವಾಗಿ ತೆರಿಗೆದಾರರು ತಮ್ಮ ರಿಟರ್ನ್ ಫೈಲಿಂಗ್ ಸಲ್ಲಿಸಬಹುದು ಎಂದು ಹಣಕಾಸು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.