ನವದೆಹಲಿ: ಅಗತ್ಯ ಔಷಧಗಳ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಇಂದು ಕೇಂದ್ರದ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಪ್ರಮುಖ ಔಷಧ ಕಂಪನಿಗಳೊಂದಿಗೆ ಸಭೆ ನಡೆಸಲಿದೆ.
ಔಷಧ ವಲಯದ ಕಂಪನಿಗಳ ಬೇಡಿಕೆ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಲಿದ್ದು, ಔಷಧ ದರ ನಿಯಂತ್ರಣ ವ್ಯಾಪ್ತಿಗೆ ಒಳಪಡದ ಕೆಲವು ಔಷಧಗಳ ಬೆಲೆ ಇಳಿಕೆ ಬಗ್ಗೆ ಪ್ರಾಧಿಕಾರ ಚರ್ಚೆ ನಡೆಸಲಿದೆ ಎಂದು ಹೇಳಲಾಗಿದೆ.
ಪ್ಯಾರಸಿಟಮಾಲ್, ಇನ್ಸುಲಿನ್ ಸೇರಿದಂತೆ ಹಲವು ಔಷಧಗಳನ್ನು ದರ ನಿಯಂತ್ರಣ ವ್ಯಾಪ್ತಿಗೆ ತರಲು ಪ್ರಾಧಿಕಾರ ಸೂಚನೆ ನೀಡಿದಲ್ಲಿ ಈ ಔಷಧಗಳ ಬೆಲೆ ಇಳಿಕೆಯಾಗಲಿದೆ. ಮೇ ತಿಂಗಳಿನಿಂದ ಪ್ಯಾರಸಿಟಮಾಲ್, ಇನ್ಸುಲಿನ್ ಸೇರಿದಂತೆ 800ಕ್ಕೂ ಅಧಿಕ ಅಗತ್ಯ ಔಷಧಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಅಗತ್ಯ ಔಷಧಗಳ ಬೆಲೆ ಇಳಿಕೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.