ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಕರಡು ವರದಿ ಸಿದ್ಧಪಡಿಸಲಾಗಿದೆ.
ದ್ವಿಚಕ್ರ ವಾಹನಗಳಲ್ಲಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದೆ. ಮಕ್ಕಳು ಪ್ರಯಾಣಿಸುವ ಬೈಕ್ ಗಳಿಗೆ ಗರಿಷ್ಠ 40 ಕಿಲೋಮೀಟರ್ ವೇಗದ ಮಿತಿ ನಿಗದಿಗೊಳಿಸಲಾಗಿದೆ.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರೊಂದಿಗೆ ಬೈಕ್ ಗಳಲ್ಲಿ ಹೋಗುವ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸುವ ಬೈಕ್ ಗಳಿಗೆ 40 ಕಿಲೋಮೀಟರ್ ವೇಗಮಿತಿ ನೀಡಲಾಗಿದೆ.
ವೇಗದ ಮಿತಿ ಮೀರಿದವರಿಗೆ 1000 ರೂಪಾಯಿ ದಂಡ ಮತ್ತು 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು. 9 ತಿಂಗಳಿಂದ ನಾಲ್ಕು ವರ್ಷದವರೆಗಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿರುತ್ತದೆ. ಸಣ್ಣ ಮಕ್ಕಳು ಇದ್ದರೆ ಮುಂದಿನ ಸವಾರರು ಬೆಲ್ಟ್ ಧರಿಸಬೇಕೆಂದು ಹೇಳಲಾಗಿದೆ.