ನವದೆಹಲಿ: ಈಗಂತೂ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಬೇಕಾದ ಎಲ್ಲ ವಸ್ತುಗಳನ್ನು ಮನೆಯಿಂದಲೇ ಪಡೆಯಬಹುದಾಗಿದೆ. ಆದರೆ ಉತ್ಪನ್ನಗಳು ನೈಜವೇ? ನಕಲಿಯೇ? ಎಂಬ ಬಗ್ಗೆ ಸಂದೇಹ ಇದ್ದೇ ಇರುತ್ತದೆ. ನಕಲಿಯಾಗಿದ್ದರೆ ಹಿಂದಿರುಗಿಸಲು ಸಾಧ್ಯವಾಗುವ ಗ್ರಾಹಕರಿಗೆ ಅನುಕೂಲವಾಗುವಂತಹ ಹೊಸ ನಿಯಮವನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.
ರಾಷ್ಟ್ರೀಯ ಇ -ಕಾಮರ್ಸ್ ನೀತಿಯ ಕರಡುವಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು. ಕರಡು ಸಿದ್ಧಪಡಿಸುವ ಬಗ್ಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯ ಹಿರಿಯ ಅಧಿಕಾರಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕರಡು ಸಿದ್ಧಪಡಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಗ್ರಾಹಕರು ಪಡೆಯಬೇಕಿದೆ. ಸಂಬಂಧಿತ ಉತ್ಪನ್ನ ಮೂಲದ ಬಗ್ಗೆ, ದೇಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಭಾರತದಲ್ಲಿ ಅದಕ್ಕೆ ಸೇರ್ಪಡೆಯಾದ ಬೆಲೆ ಮೊದಲಾದವುಗಳ ಬಗ್ಗೆ ಇ -ಕಾಮರ್ಸ್ ಕಂಪನಿಗಳು ತಮ್ಮ ವೇದಿಕೆಯಲ್ಲಿ ನೋಂದಾಯಿಸಲಾದ ಮಾರಾಟಗಾರರ ಬಗ್ಗೆ ತಿಳಿಸಿ ಗ್ರಾಹಕರನ್ನೂ ಪರಿಗಣಿಸಬೇಕು.
ಇ-ಕಾಮರ್ಸ್ ಕಂಪನಿಗಳು ತಮ್ಮ ವೇದಿಕೆಯಲ್ಲಿ ಮಾರಾಟವಾಗುವ ಉತ್ಪನ್ನ ನಕಲಿಯಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸುರಕ್ಷಿತ ಸಿಬ್ಬಂದಿ ಇದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಕರಡಿನಲ್ಲಿ ತಿಳಿಸಲಾಗಿದೆ. ಯಾವುದೇ ಇ -ಕಾಮರ್ಸ್ ಕಂಪನಿ ಫ್ಲಾಟ್ ಫಾರಂನಿಂದ ನಕಲಿ ಉತ್ಪನ್ನ ಮಾರಾಟ ಮಾಡಿದರೆ ಅದು ಆನ್ಲೈನ್ ಕಂಪನಿ ಮತ್ತು ಮಾರಾಟಗಾರರ ಜವಾಬ್ದಾರಿಯಾಗಿರುತ್ತದೆ. ಆನ್ಲೈನ್ ಶಾಪಿಂಗ್ ಫ್ಲಾಟ್ ಫಾರ್ಮ್ ನಿಂದ ನಕಲಿ ಉತ್ಪನ್ನ ಮಾರಾಟ ಮಾಡುವ ದೂರುಗಳು ಹೆಚ್ಚಾಗಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅನೇಕ ಗ್ರಾಹಕರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ.
ಹಾಗಾಗಿ ಇ-ಕಾಮರ್ಸ್ ನಲ್ಲಿರುವ ನ್ಯೂನ್ಯತೆ ಸರಿಪಡಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇ -ಮಾರುಕಟ್ಟೆಗಳು ಜನರ ಜೀವನಶೈಲಿಯನ್ನು ಸುಲಭಗೊಳಿಸುತ್ತವೆ ಎನ್ನಲಾಗಿದೆ.