ಕೋಳಿ ಮೊಟ್ಟೆ ದರ ಏರಿಕೆ ಕಂಡಿದ್ದು, ಚಿಕನ್ ದರ ಇಳಿಕೆಯಾಗಿದೆ. ಕಳೆದ 15 ದಿನಗಳಿಂದ ಮೊಟ್ಟೆ ದರ ಏರಿಕೆ ಕಂಡು 6.60 ರೂ.ನಿಂದ 7.50 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವಾರದ ಹಿಂದೆ ಮೊಟ್ಟೆ ದರ 5.50 ರೂ.ನಿಂದ 6 ರೂ. ವರೆಗೆ ಇತ್ತು.
ಮುಂಗಾರು ಮಳೆ ಕೈಕೊಟ್ಟ ಕಾರಣ ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿದೆ. ಸೋಯಾ ಮತ್ತು ಮೆಕ್ಕೆಜೋಳದ ದರ ಏರಿಕೆ ಹಾದಿಯಲ್ಲಿದ್ದು, ವಿದ್ಯುತ್ ದರ, ಕಾರ್ಮಿಕರ ವೇತನ ಮೊದಲಾದ ಉತ್ಪಾದನಾ ವೆಚ್ಚಗಳಿಂದ ಮೊಟ್ಟೆ ದರ ಏರಿಕೆಯಾಗಿದೆ.
ಕಳೆದ ವರ್ಷ 18ರಿಂದ 20 ರೂ. ಇದ್ದ ಮೆಕ್ಕೆಜೋಳದ ದರ 24 ರಿಂದ 26 ರೂ.ಗೆ ಹೆಚ್ಚಳವಾಗಿದೆ. ಸೋಯಾ ಕೆಜಿಗೆ 12 ರಿಂದ 15 ರೂ. ಏರಿಕೆಯಾಗಿದೆ. ಸೋಯಾ ದರ 40 ರಿಂದ 42 ರೂ. ಇದ್ದು, ಈ ಬಾರಿ 52 ರಿಂದ 54 ರೂ.ಗೆ ಏರಿಕೆ ಕಂಡಿದೆ.
ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೇಡಿಕೆಗಿಂತ ಪೂರೈಕೆ ಹೆಚ್ಚಳವಾಗಿದ್ದು, ಬ್ರಾಯ್ಲರ್ ಕೋಳಿ ದರ ಕೆಜಿಗೆ 140 -160 ರೂ. ಇದೆ. ಈ ಹಿಂದೆ 180 -200 ರೂ.ವರೆಗೂ ಮಾರಾಟವಾಗಿತ್ತು.