8 ವರ್ಷಗಳ ಹಿಂದೆ ಪ್ರಣಬ್ ಮುಖರ್ಜಿ ಕೇಂದ್ರದ ಹಣಕಾಸು ಸಚಿವರಾಗಿದ್ದ ವೇಳೆ ನಡೆದ ಘಟನೆ ಇದು. ಸಭೆಯೊಂದರಲ್ಲಿ ಪ್ರಣಬ್ ನಿರತರಾಗಿದ್ದ ವೇಳೆ ಅವರ ಮೊಬೈಲ್ ರಿಂಗಣಿಸಿತ್ತು. ಕರೆಗೆ ಉತ್ತರಿಸಿದ ಬಳಿಕ ಮುಖರ್ಜಿ ಕೋಪಗೊಂಡಿದ್ದರು. ಕರೆ ಮಾಡಲು ಯಾವುದೇ ಪ್ರಮುಖ ಕಾರಣವಿರಲಿಲ್ಲ. ಟೆಲಿಮಾರ್ಕೆಟರ್ಸ್, ಸಾಲ ಬೇಕೇ ಎಂದು ಕೇಳಿದ್ದರಂತೆ..!
ಇದೇ ರೀತಿ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಗೂ ಗೃಹ ಸಾಲದ ಅವಶ್ಯಕತೆ ಇದೆಯೇ ಎಂದು ಕರೆ ಮಾಡಿದ್ದಾರೆ. ಪ್ರಣಬ್ ಮುಖರ್ಜಿಗೆ ಬಂದ ಈ ಒಂದು ಕರೆ ʼಡು ನಾಟ್ ಕಾಲ್ ರಿಜಿಸ್ಟರ್ʼ ಎಂಬ ವಿಧಾನವನ್ನ ಪರಿಚಯಿಸುವಂತೆ ಮಾಡಿದೆ. ಈ ಸಮಸ್ಯೆಯು ಹೈದರಾಬಾದ್ ಮೂಲದ ಟೆಲಿಕಾಂ ಆಧಾರಿತ ಸ್ಟಾರ್ಟ್ ಅಪ್ ಸಂಸ್ಥೆ ದೂಸ್ರಾಗೆ ಅಡಿಪಾಯವನ್ನ ಹಾಕಿದೆ. ಇದು ಟೆಲಿ ಮಾರ್ಕೆಟಿಂಗ್ ಕರೆಯಿಂದ ಜನರನ್ನ ರಕ್ಷಿಸುವ ವರ್ಚುವಲ್ ಫೋನ್ ಸಂಖ್ಯೆಯನ್ನ ಒದಗಿಸುತ್ತದೆ.
ದೂಸರಾ ಎಂಬುದು ಹಿಂದಿ ಪದವಾಗಿದ್ದು ಇದರ ಅರ್ಥ ಎರಡನೆಯದು ಎಂದಾಗಿದೆ. ಇದೊಂದು ವರ್ಚುವಲ್ ಮೊಬೈಲ್ ಸಂಖ್ಯೆಯಾಗಿದ್ದು ಒಬ್ಬರ ಗೌಪ್ಯತೆಗೆ ಧಕ್ಕೆಯಾಗದಂತೆ ಗ್ರಾಹಕರು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇದು ನಿಮ್ಮ ವೈಯಕ್ತಿಕ ಸಂಖ್ಯೆಯನ್ನ ಅನಗತ್ಯ ಕರೆಗಳಿಂದ ದೂರವಿರಿಸುತ್ತದೆ ಎಂದು ದೂಸ್ರಾ ಸಂಸ್ಥಾಪಕ ಹಾಗೂ ಸಿಇಓ ಆದಿತ್ಯ ವುಚಿ ಹೇಳಿದ್ರು.
ಕಳೆದ ವರ್ಷ ಮೇ ತಿಂಗಳಲ್ಲಿ ಆದಿತ್ಯ ಈ ದೂಸ್ರಾ ಎಂಬ ಕಂಪನಿಯನ್ನ ಆರಂಭಿಸಿದ್ರು. ದೂಸ್ರಾ ಅನ್ನೋದು ಅಪ್ಲಿಕೇಶನ್ ಹಾಗೂ ಚಂದಾದಾರಿಕೆ ಆಧಾರಿತ ಸೇವೆಯಾಗಿದೆ. ಇದು ಎಲ್ಲಾ ಇನ್ಕಮಿಂಗ್ ಕರೆಯನ್ನ ಬ್ಲಾಕ್ ಮಾಡಿ ವಾಯ್ಸ್ ಮೆಸೇಜ್ ಕಳುಹಿಸಲು ಆಯ್ಕೆಯನ್ನ ನೀಡುತ್ತೆ. ಬಳಕೆದಾರರಿಗೆ ಕರೆ ಮುಖ್ಯವಾಗಿದ್ದರೆ ಅವರು ಹಿಂತಿರುಗಿ ಕರೆಯನ್ನ ಮಾಡಬಹುದಾಗಿದೆ.
ಓಲಾ, ಊಬರ್, ಜೊಮ್ಯಾಟೋ ಅಥವಾ ಸ್ವಿಗ್ಗಿಯ ಕರೆಗಳು ಸರಿಯಾದ ಸಮಯಕ್ಕೆ ಎತ್ತಬೇಕಾದ ಹಿನ್ನೆಲೆ ಇದನ್ನ ನೀವು ವೈಟ್ ಲಿಸ್ಟ್ಗೆ ಸೇರಿಸಬಹುದಾಗಿದೆ. ಈ ರೀತಿ ಮಾಡಿದ್ರೆ ಈ ಕರೆಗಳನ್ನ ದೂಸರಾ ಅಪ್ಲಿಕೇಶನ್ ಅನುಮತಿಸುತ್ತದೆ.