ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ದ ಪರಾಭವಗೊಂಡಿರುವ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇನ್ನು ಕೆಲ ದಿನಗಳಲ್ಲೇ ತಮ್ಮ ಅಧಿಕಾರವನ್ನು ಬಿಟ್ಟುಕೊಡಬೇಕಿದೆ.
ಇದರ ಮಧ್ಯೆಯೇ ಡೋನಾಲ್ಡ್ ಟ್ರಂಪ್ ಚೀನಾಗೆ ಮತ್ತೊಂದು ಶಾಕ್ ನೀಡಿದ್ದಾರೆ. ಈ ಮೊದಲು ಟಿಕ್ ಟಾಕ್ ಸೇರಿದಂತೆ ಹಲವು ಆಪ್ ಗಳ ಮೇಲೆ ನಿಷೇಧ ಹೇರಿದ್ದ ಟ್ರಂಪ್ ಈಗ ಮತ್ತೆ ಚೀನಾ ಮೂಲದ ಕೆಲ ಆಪ್ ಗಳ ಮೇಲೆ ನಿಷೇಧ ಹೇರಿದ್ದಾರೆ.
ವಿ ಚಾಟ್ ಪೇ, ಆಲಿ ಪೇ ಸೇರಿದಂತೆ ಹಲವು ಚೀನಾ ಕಂಪನಿಗಳ ಆಪ್ ಮೇಲೆ ಈಗ ನಿಷೇಧ ಹೇರಲಾಗಿದ್ದು, ಇವುಗಳು ಬಳಕೆದಾರರ ಮಾಹಿತಿಯನ್ನು ಚೀನಾಗೆ ರವಾನಿಸುತ್ತಿವೆ ಎಂದು ಆರೋಪಿಸಲಾಗಿದೆ. ಆದರೆ ಸದ್ಯದಲ್ಲೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಜೋ ಬಿಡೆನ್ ಈ ಆದೇಶಕ್ಕೆ ಯಾವ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ.