ಡೊಮಿನೋಸ್, ಪಿಜ್ಜಾ ಪ್ರೇಮಿಗಳಿಗೆ ಬೇಸರದ ಸುದ್ದಿ ನೀಡಿದೆ. ಡೊಮಿನೋಸ್ ಇನ್ಮುಂದೆ ಪಿಜ್ಜಾ ಡೆಲಿವರಿಗೆ ಚಾರ್ಜ್ ಮಾಡಲಿದೆ. ಡೊಮಿನೋಸ್ ದೇಶದಲ್ಲಿ 1000ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಎಲ್ಲೆಡೆ ಇದು ಅನ್ವಯವಾಗಲಿದೆ.
ಒಂದು ಡೆಲಿವರಿಗೆ ಇನ್ಮುಂದೆ ಗ್ರಾಹಕರು 30 ರೂಪಾಯಿ ನೀಡ್ಬೇಕು. ಈ ಹಿಂದೆ ಡೆಲಿವರಿ ಚಾರ್ಜ್ ಇರಲಿಲ್ಲ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಕಂಪನಿಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗಿದೆ. ಇನ್ಮುಂದೆ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಡೆಲಿವರಿ ಚಾರ್ಜ್ ವಸೂಲಿ ಮಾಡಲು ಕಂಪನಿ ಮುಂದಾಗಿದೆ.
ಅಂದಾಜಿನ ಪ್ರಕಾರ, ರೆಸ್ಟೋರೆಂಟ್ ವಲಯದಲ್ಲಿ ಸುಮಾರು ಎರಡು ಮಿಲಿಯನ್ ಉದ್ಯೋಗಗಳು ಕೆಲಸ ಕಳೆದುಕೊಂಡಿದ್ದಾರೆ. ಅನೇಕ ಬ್ರಾಂಡ್‌ಗಳನ್ನು ಮುಚ್ಚಲಾಗಿದೆ. ಜುಬಿಲೆಂಟ್ ಫುಡ್ ವರ್ಕ್ಸ್ 2020 ರ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ 32.5 ಕೋಟಿ ರೂಪಾಯಿಗಳ ನಷ್ಟವನ್ನು ವರದಿ ಮಾಡಿದೆ.