
ನವದೆಹಲಿ: ದೇಶಿಯ ವಿಮಾನದ ಟಿಕೆಟ್ ಕನಿಷ್ಠ ದರವನ್ನು ಶೇಕಡ 5 ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ದೇಶೀಯ ವಿಮಾನ ಪ್ರಯಾಣಿಕರಿಗೆ ಶಾಕ್ ನೀಡಿದೆ. ವೈಮಾನಿಕ ಇಂಧನ ದರದಲ್ಲಿ ಭಾರಿ ಏರಿಕೆ ಆದ ಕಾರಣ ಕೇಂದ್ರ ಸರ್ಕಾರ ವಿಮಾನಗಳ ಟಿಕೆಟ್ ಕನಿಷ್ಠ ದರ ಹೆಚ್ಚಳ ಮಾಡಿದೆ. ಆದರೆ ಗರಿಷ್ಟ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ದೆಹಲಿಯಿಂದ ಮುಂಬೈಗೆ ಪ್ರಯಾಣಿಸಲು ಕನಿಷ್ಠ ದರ 3500 ರೂ.ನಿಂದ 4100 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಕನಿಷ್ಠ ದರವನ್ನು ಏರಿಕೆ ಮಾಡಲಾಗಿದೆ. ಕೊರೋನಾ ಕಾರಣದಿಂದಾಗಿ ವಿಮಾನಗಳಲ್ಲಿ ಶೇಕಡ 80 ರಷ್ಟು ಆಸನಗಳ ಭರ್ತಿಗೆ ನಿಬಂಧನೆ ಹಾಕಲಾಗಿದ್ದು ಏಪ್ರಿಲ್ ಕೊನೆಯವರೆಗೂ ನಿಬಂಧನೆ ಮುಂದುವರೆಯಲಿದೆ.