ಭಾರತದಲ್ಲಿ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿರುವ ಆಪ್ ಗಳಲ್ಲಿ ಟಿಕ್ ಟಾಕ್ ಮುಂಚೂಣಿಯಲ್ಲಿದೆ. ಚೀನಾ ಮೂಲದ ಈ ಆಪ್ ಅನ್ನು ರಿಮೂವ್ ಮಾಡುವ ಅಭಿಯಾನ ಕೂಡ ನಡೆಸಲಾಗಿತ್ತು.
ಇದೀಗ ಟಿಕ್ ಟಾಕ್ ಚೀನಾ ವಿರುದ್ಧದ ಪೋಸ್ಟ್ ಗಳಿಗೆ ಕೊಕ್ ನೀಡುತ್ತಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಖ್ಯಾತ ಕಮೆಡಿಯನ್ ಸಲೋನಿ ಗೌರ್ ಟಿಕ್ ಟಾಕ್ ನಲ್ಲಿ ಹಾಕಿದ್ದ ಪೋಸ್ಟ್ ಒಂದನ್ನು ತೆಗೆದು ಹಾಕಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಗೌರ್, ಟಿಕ್ ಟಾಕ್ ಈವರೆಗೆ ಮಹಿಳೆಯರ ಮೇಲಿನ ದೌರ್ಜನ್ಯ, ಪ್ರಾಣಿಹಿಂಸೆ ಮೊದಲಾದ ವಿಡಿಯೋಗಳನ್ನು ತೆಗೆದು ಹಾಕುತ್ತಿತ್ತು. ಈಗ ಚೀನಾ ವಿರುದ್ಧ ನಾನು ಮಾಡಿರುವ ವಿಡಂಬನಾತ್ಮಕ ವಿಡಿಯೋವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.