ಕ್ರೆಡಿಟ್ ಕಾರ್ಡ್ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಗ್ರಾಹಕರು ಇರುತ್ತಾರೆ — ಆದಾಯ-ವೆಚ್ಚದ ಅನುಪಾತದಲ್ಲಿ ಅಸ್ಥಿರತೆಯಿಂದ ಬಳಲುತ್ತಿರುವವರು ಹಾಗೂ ಇದೇ ಅನುಪಾತದಲ್ಲಿ ಸ್ಥಿರತೆ ಕಾಪಾಡಿಕೊಂಡು ಒಳ್ಳೆಯ ಕ್ರೆಡಿಟ್ ಸ್ಕೋರ್ ಇಟ್ಟುಕೊಂಡವರು.
ಇದನ್ನೇ ಆಧರಿಸಿ ಕ್ರೆಡಿಟ್ ಕಾರ್ಡ್ಗಳನ್ನು — 1. ಸೆಕ್ಯೂರ್ಡ್ ಕಾರ್ಡ್ ಹಾಗೂ 2. ಅನ್ಸೆಕ್ಯೂರ್ಡ್ ಕಾರ್ಡ್ ಎಂದು ವರ್ಗೀಕರಿಸಬಹುದಾಗಿದೆ. ಆದರೆ ಈ ಹೆಸರುಗಳನ್ನು ನೋಡಿಕೊಂಡು ಕ್ರೆಡಿಟ್ ಕಾರ್ಡ್ ಮಾದರಿಗಳ ಬಗ್ಗೆ ಗೊಂದಲ ಆಗಬೇಡಿ.
ಅಸ್ಥಿರ ಆದಾಯ ಇರುವ ಮಂದಿಗೆ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಕೊಡಲಾಗುವುದು. ಭದ್ರತೆಗಾಗಿ ಒಂದು ಅಮೌಂಟ್ಅನ್ನು ಜಮಾ ಮಾಡಿದ ಬಳಿಕ ಈ ಕಾರ್ಡ್ ಅನ್ನು ಕೊಡಲಾಗುವುದು. ಈ ಭದ್ರತಾ ಜಮೆಯನ್ನು ಎಫ್ಡಿ ರೂಪದಲ್ಲಿ ಪಾವತಿ ಮಾಡಿ ಸುಲಭವಾಗಿ ಈ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಅನ್ನು ನೀವು ಪಡೆಯಬಹುದಾಗಿದೆ.
ಈ ಎಫ್ಡಿಯಲ್ಲಿ ಜಮಾ ಮಾಡಲಾದ ಮೊತ್ತದ ಮೇಲೆ ಕ್ರೆಡಿಟ್ನ ಗರಿಷ್ಠ ಮಿತಿಯನ್ನು ನಿಗದಿ ಮಾಡಲಾಗುವುದು. ಸಾಮಾನ್ಯವಾಗಿ ಎಫ್ಡಿಯಲ್ಲಿ ಜಮಾ ಮಾಡಿದ 80%ನಷ್ಟು ಮೊತ್ತವನ್ನು ಕ್ರೆಡಿಟ್ನ ಗರಿಷ್ಠ ಮಿತಿಯ ರೂಪದಲ್ಲಿ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ಅನೇಕ ದೊಡ್ಡ ಬ್ಯಾಂಕುಗಳು ಎಫ್ಡಿ ಮೇಲೆ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುತ್ತಿವೆ. ಅವುಗಳಲ್ಲಿ ಜನಪ್ರಿಯವಾದ ಕೆಲವೆಂದರೆ:
ಎಸ್ಬಿಐ ಉನ್ನತಿ
ಎಸ್ಬಿಐ ಅಡ್ವಾಂಟೇಜ್ ಪ್ಲಸ್ ಕ್ರೆಡಿಟ್ ಕಾರ್ಡ್
ಐಸಿಐಸಿಐ ಬ್ಯಾಂಕ್ ಇನ್ಸ್ಟಂಟ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್
ಐಸಿಐಸಿಐ ಬ್ಯಾಂಕ್ ಕೋರಲ್ ಕ್ರೆಡಿಟ್ ಕಾರ್ಡ್
ಐಸಿಐಸಿಐ ಬ್ಯಾಂಕ್ ರೂಬಿಎಕ್ಸ್ ಕ್ರೆಡಿಟ್ ಕಾರ್ಡ್
ಆಕ್ಸಿಸ್ ಬ್ಯಾಂಕ್ ಇನ್ಸ್ಟಾ ಈಸಿ ಕ್ರೆಡಿಟ್ ಕಾರ್ಡ್
ಕೊಟಕ್ ಮಹಿಂದ್ರಾ ಬ್ಯಾಂಕ್ ಆಕ್ವಾ ಗೋಲ್ಡ್ ಕ್ರೆಡಿಟ್ ಕಾರ್ಡ್