alex Certify ಕೇಂದ್ರ ಸರ್ಕಾರಿ ನೌಕರರ 20 ದಿನಗಳ ಕಡ್ಡಾಯ ರಜೆ ಕುರಿತು ಹೊರಬಿತ್ತು ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರ 20 ದಿನಗಳ ಕಡ್ಡಾಯ ರಜೆ ಕುರಿತು ಹೊರಬಿತ್ತು ಸ್ಪಷ್ಟನೆ

ಕೇಂದ್ರ ಸರ್ಕಾರದ ಖಾಯಂ ನೌಕರರ ಬಗ್ಗೆ ಮಹತ್ವದ ಸುದ್ದಿಯೊಂದು ಹರಡಿತ್ತು. ಸರ್ಕಾರ ತನ್ನ ಖಾಯಂ ನೌಕರರಿಗೆ ಪ್ರತಿ ವರ್ಷ ಕನಿಷ್ಠ 20 ದಿನಗಳ ಕಾಲ ಗಳಿಕೆ ರಜೆ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಿದೆ ಎಂಬ ವರದಿ ಬಿತ್ತರವಾಗಿತ್ತು. ಆದ್ರೀಗ ಈ ಸುದ್ದಿ ಸುಳ್ಳು ಎಂಬುದು ಬಹಿರಂಗವಾಗಿದೆ. ಕೇಂದ್ರ ಸರ್ಕಾರ ಈ ರೀತಿಯ ಯಾವುದೇ ಘೋಷಣೆಯನ್ನು ಮಾಡಿಲ್ಲವೆಂದು ಸ್ಪಷ್ಟವಾಗಿದೆ.

ಕೇಂದ್ರ ಸರ್ಕಾರ ಹೊಸ ರಜಾ ನೀತಿಯನ್ನು ಪರಿಚಯಿಸುತ್ತಿದೆ. ಇದ್ರಲ್ಲಿ ಖಾಯಂ ನೌಕರರು ವರ್ಷದಲ್ಲಿ 20 ದಿನ ಗಳಿಕೆಯ ರಜೆ ತೆಗೆದುಕೊಳ್ಳುವುದು ಕಡ್ಡಾಯವಾಗಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಉದ್ಯೋಗಿಗಳಿಗೆ ಆರೋಗ್ಯಕರ ಕೆಲಸ ಹಾಗೂ ವೈಯಕ್ತಿಕ ಜೀವನದ ಸಮತೋಲವನ್ನು ಉತ್ತೇಜಿಸಲು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದು ಹೇಳಲಾಗಿತ್ತು.

ಸರ್ಕಾರದ ಮಾಹಿತಿ ವಿಭಾಗದ ಪ್ರೆಸ್ ಇನ್ಫರ್ಮೆಷನ್ ಬ್ಯೂರೋ ಇದನ್ನು ಸುಳ್ಳು ಎಂದಿದೆ. ಸರ್ಕಾರದಿಂದ ಇಂಥ ಘೋಷಣೆಯಾಗಿಲ್ಲ. ಮಾಧ್ಯಮಗಳ ಸುಳ್ಳು ವರದಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಪಿಐಬಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...