
ಬೆಂಗಳೂರು: ಸ್ಮಾರ್ಟ್ ಕಾರ್ಡ್ ಕೊರತೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ಆರ್.ಸಿ., ಡಿಎಲ್ ಗಾಗಿ ಸವಾರರು ಪರದಾಟ ನಡೆಸುವಂತಾಗಿದೆ. ಕಾರ್ಡ್ ನವೀಕರಣಕ್ಕೆ ಅವಧಿ ಮುಕ್ತಾಯಗೊಂಡರೂ ನಿಗದಿತ ಸಮಯಕ್ಕೆ ಸ್ಮಾರ್ಟ್ ಸಿಗದೇ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.
ಸಾರಿಗೆ ಇಲಾಖೆಯಲ್ಲಿ ಸ್ಮಾರ್ಟ್ ಕಾರ್ಡ್ ಕೊರತೆ ಎದುರಾಗಿದ್ದು, ಡಿಎಲ್, ಹೊಸ ವಾಹನ ಖರೀದಿಸುವ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಸ್ಮಾರ್ಟ್ ಕಾರ್ಡ್ ಕೊರತೆಯ ಅವಧಿ ಮುಗಿದರೂ ಕಾರ್ಡ್ ಪಡೆದುಕೊಳ್ಳಲು ಕಾಯುವಂತಾಗಿದೆ. ಕೇಂದ್ರ ಸರ್ಕಾರ ದಾಖಲೆ ನವೀಕರಣ ಅವಧಿಯನ್ನು ಅ. 31 ರ ವರೆಗೆ ವಿಸ್ತರಿಸಿತ್ತು.
ಆದರೆ, ಎರಡು ತಿಂಗಳಿಂದ ಸ್ಮಾರ್ಟ್ ಕಾರ್ಡ್ ಕೊರತೆ ಕಂಡುಬಂದಿದ್ದು, ಅವಧಿ ಮುಗಿದರೂ ಸವಾರರು ಕಾರ್ಡ್ ಪಡೆಯಲು ಸಾಧ್ಯವಾಗದೇ ಪೊಲೀಸರ ಬಳಿ ಉತ್ತರಿಸುವುದೇ ಸಮಸ್ಯೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.