ಆಧಾರ್ ಕಾರ್ಡ್ ಪ್ರತಿಯೊಬ್ಬ ನಾಗರೀಕನಿಗೂ ಅತ್ಯಮೂಲ್ಯವಾದದ್ದು ಎಂಬುದು ಗೊತ್ತಿರುವ ವಿಚಾರವೇ. ಆಧಾರ್ ಕಾರ್ಡ್ ಇದ್ದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಈಗಾಗಲೇ ಅನೇಕ ಯೋಜನೆಗಳ ಲಾಭವನ್ನು ಆಧಾರ್ ಹೊಂದಿರುವವರು ಪಡೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ಒಂದಿದ್ದರೆ ಸಾಕು ಎನ್ನುವ ಮಟ್ಟಿಗೆ ಜನ ಬಂದಿದ್ದಾರೆ. ಇರುವ ಅನೇಕ ಡಾಕ್ಯುಮೆಂಟ್‌ಗಳಿಗೆ ಆಧಾರ್ ಅನ್ನು ಲಿಂಕ್ ಮಾಡಲಾಗುತ್ತಿದೆ. ಇದೀಗ ಡ್ರೈವಿಂಗ್ ಲೈಸೆನ್ಸ್‌ಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ.
ಹೌದು, ಚಾಲನಾ ಪರವಾನಿಗೆಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಬೇಕು ಎಂಬುದು ಸರ್ಕಾರದ ಆದೇಶ. ಲಿಂಕ್ ಮಾಡಲು ಸೈಬರ್ ಅಥವಾ ಸರ್ಕಾರ ಧೃಡೀಕರಿಸಿದ ಕಡೆಯೇ ಹೋಗಬೇಕು ಎಂಬ ಚಿಂತೆ ಬಿಟ್ಟುಬಿಡಿ. ಏಕೆಂದರೆ ಮನೆಯಲ್ಲಿಯೇ ಕುಳಿತು ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಮಾಡಬಹುದಾಗಿದೆ. ಅದು ಸರಳವಾಗಿಯೇ.
ಮೊದಲು sarathi.parivahan.gov.in ಗೆ ಭೇಟಿ ನೀಡಿ ಅಲ್ಲಿ ಕೇಳುವ ವಿವರವನ್ನು ನೀಡಿ. ನಂತರ ಆಧಾರ್ ಸಂಖ್ಯೆಯನ್ನು ನೀಡಬೇಕು. ಆಧಾರ್ ಸಂಖ್ಯೆಗೆ ನೋಂದಾಯಿಸಿರುವ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಒಟಿಪಿಯನ್ನು ನೀಡಿದರೆ ಸಾಕು ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಲ್ಲಿ ದೃಢೀಕರಣ ಸಂದೇಶವನ್ನು ಸ್ವೀಕರಿಸಲಾಗುತ್ತದೆ.
ಇನ್ನು ಇದರ ಮುಖ್ಯ ಉದ್ದೇಶ ಅಂದರೆ ನಕಲಿ ಪರವಾನಿಗೆಗೆ ಬ್ರೇಕ್ ಬಿದ್ದಂತಾಗುತ್ತದೆ. ಹಾಗೂ ವಾಹನ ಕಳೆದು ಹೋದರೆ ಅಪಘಾತವಾದರೆ ಪರವಾನಿಗೆ ಹೊಂದಿರುವವರನ್ನು ಕಂಡುಹಿಡಿಯಬಹುದು.