ನವದೆಹಲಿ: ದೆಹಲಿಯಲ್ಲಿ ಡೀಸೆಲ್ ದರ 8 ರೂಪಾಯಿ ಇಳಿಕೆಯಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇಕಡ 30 ರಿಂದ ಶೇಕಡ 16.75 ಕ್ಕೆ ಇಳಿಕೆ ಮಾಡಿದೆ.
ಇದರಿಂದಾಗಿ ಡೀಸೆಲ್ ದರ 8.36 ರೂಪಾಯಿ ಇಳಿಕೆಯಾಗಿದೆ. ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಡೀಸೆಲ್ ದರ ದೆಹಲಿಯಲ್ಲಿ ಬುಧವಾರ 81.94 ರೂಪಾಯಿ ತಲುಪಿದ್ದು, ಈಗ 8.36 ರೂ.ನಷ್ಟು ತೆರಿಗೆ ಕಡಿಮೆ ಮಾಡಿರುವುದರಿಂದ 73.64 ರೂ.ಗೆ ಇಳಿದಿದೆ. ಜೂನ್ 7 ರಿಂದ ದೈನಂದಿನ ದರ ಪರಿಷ್ಕರಣೆ ಆರಂಭವಾಗಿ ಡೀಸೆಲ್ ದರ 12.55 ರೂ.ನಷ್ಟು ಏರಿಕೆಯಾಗಿದ್ದು ಪೆಟ್ರೋಲ್ ಬೆಲೆಗಿಂತಲೂ ಹೆಚ್ಚಾಗಿ ದಾಖಲೆ ಬರೆದಿತ್ತು.