ನವದೆಹಲಿ: ಲಾಕ್ ಡೌನ್ ಅವಧಿಯಲ್ಲಿ ಸಾಲದ ಕಂತು ಪಾವತಿಸದವರ ಚಕ್ರಬಡ್ಡಿಯನ್ನು ಮನ್ನಾ ಮಾಡಲಾಗಿದ್ದು, ಇಎಂಐ ಪಾವತಿಸಿದವರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಮಾರ್ಚ್ 31 ರಿಂದ ಆಗಸ್ಟ್ ವರೆಗೆ ಇಎಂಐ ಪಾವತಿಗೆ ಆರ್ಬಿಐ ವಿನಾಯಿತಿ ನೀಡಿತ್ತು. ಬಳಿಕ ಮೊರಾಟೋರಿಯಂ ಅವಧಿಯಲ್ಲಿ ಬಡ್ಡಿ ಮೇಲಿನ ಬಡ್ಡಿ ಪಾವತಿ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಬಡ್ಡಿಯ ಮೇಲಿನ ಬಡ್ಡಿ ವಸೂಲಿ ಮಾಡದಂತೆ ಸೂಚನೆ ನೀಡಿತ್ತು. ಇದರಿಂದ ಸರ್ಕಾರದ ಖಜಾನೆಗೆ ಸರಿಸುಮಾರು 7000 ಕೋಟಿ ರೂಪಾಯಿ ಹೊರೆ ಬಿದ್ದಿತ್ತು.
ಆದರೆ ಲಾಕ್ಡೌನ್ನಂತಹ ಕಠಿಣ ಪರಿಸ್ಥಿತಿಯಲ್ಲೂ ಮೊರಟೋರಿಯಂ ಲಾಭ ಪಡೆಯದ ಅನೇಕ ಸಾಲಗಾರರು ಬ್ಯಾಂಕ್ ಗೆ ಸರಿಯಾದ ಸಮಯದಲ್ಲಿ ಬಡ್ಡಿ ಪಾವತಿ ಮಾಡಿದ್ದರು.
ಇದೀಗ ಇಂತಹ ಸಾಲಗಾರರಿಗೆ ಕ್ಯಾಶ್ ಬ್ಯಾಕ್ ಸೌಕರ್ಯ ನೀಡಲು ಕೇಂದ್ರ ಹಣಕಾಸು ಸಚಿವಾಲಯ ನಿರ್ಧರಿಸಿದೆ. ಇದರಿಂದ ಸರಿಯಾದ ಕಂತುಗಳಲ್ಲಿ ಬಡ್ಡಿ ಪಾವತಿಸಿದ ಸಾಲಗಾರರಿಗೆ 6 ತಿಂಗಳ ಸಿಂಪಲ್ ಲೋನ್ ಇಂಟರೆಸ್ಟ್ ನ ಡಿಫರೆನ್ಸ್ ಲಾಭ ಸಿಗಲಿದೆ.