ವಿಶ್ವಾದ್ಯಂತ ಅನೇಕ ಪ್ರಸಿದ್ಧ ವಿಸ್ಕಿ ಬ್ರಾಂಡ್‌ಗಳನ್ನು ತಯಾರಿಸುವ ಡಯಾಜಿಯೊ ಕಂಪನಿಯು ಪರಿಸರ ರಕ್ಷಣೆಗೆ ಮುಂದಾಗಿದೆ. ಪರಿಸರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಜಾನಿ ವಾಕರ್ ವಿಸ್ಕಿ ಸ್ಮಿರ್ನಾಫ್ ವೋಡ್ಕಾವನ್ನು ಗಾಜಿನ ಬಾಟಲಿ ಬದಲು ಕಾಗದ ಆಧಾರಿತ ಸ್ಪಿರಿಟ್ಸ್ ಬಾಟಲಿಯಲ್ಲಿ ನೀಡಲು ಮುಂದಾಗಿದೆ.
ಮುಂದಿನ ವರ್ಷದಿಂದ ಹೊಸ ಪ್ಯಾಕೇಜಿಂಗ್ ಪ್ರಯೋಗವನ್ನು ಪ್ರಾರಂಭಿಸಲು ಕಂಪನಿ ನಿರ್ಧರಿಸಿದೆ. ತನ್ನ ಎಲ್ಲಾ ಬ್ರಾಂಡ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕಂಪನಿ ಹೇಳಿದೆ. ಗಾಜಿನ ಬಾಟಲ್ ತಯಾರಿಕೆಗೆ ಹೆಚ್ಚು ಖರ್ಚಾಗುತ್ತದೆ. ಇಂಗಾಲದ ಹೊರಸೂಸುವಿಕೆ ಹೆಚ್ಚಾಗುತ್ತದೆ. ಆದ್ರೆ ಮುಂದೆ ತಯಾರಾಗುವ ಬಾಟಲಿಗಳನ್ನು ಗ್ರಾಹಕರು ನೇರವಾಗಿ ಮರುಬಳಕೆಗೆ ಕಳುಹಿಸಬಹುದಾಗಿದೆ.
ಕಾಗದದ ಬಾಟಲಿಗಳನ್ನು ತಯಾರಿಸಲು, ಕಂಪನಿಯು ಪಾಲ್ಪೆಕ್ಸ್ ಎಂಬ ಮತ್ತೊಂದು ಕಂಪನಿಯನ್ನು ಶುರು ಮಾಡ್ತಿದೆ. ಈ ಕಂಪನಿಯು ಪೆಪ್ಸಿಕೋ ಮತ್ತು ಯೂನಿಲಿವರ್‌ನಂತಹ ಬ್ರಾಂಡ್‌ಗಳಿಗೆ ಪೇಪರ್ ಬಾಟಲಿಗಳನ್ನು ಸಹ ತಯಾರಿಸಲಿದೆ.