ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. 2020ರ ಅಗಸ್ಟ್ 15ರಂದು ಧೋನಿ ತಮ್ಮ ನಿವೃತ್ತಿ ಕುರಿತು ಮಹತ್ವದ ಘೋಷಣೆ ಮಾಡಿದ್ದು, ಆ ಬಳಿಕ ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು.
ಕ್ರಿಕೆಟ್ ಜೊತೆಗೆ ಹಲವು ಹವ್ಯಾಸಗಳನ್ನು ಧೋನಿ ಹೊಂದಿದ್ದು ಈ ಪೈಕಿ ಕೃಷಿ ಕೂಡಾ ಒಂದು. ತಮ್ಮ ತವರು ರಾಂಚಿಯಲ್ಲಿ ಧೋನಿ 43 ಎಕರೆ ಭೂಮಿ ಹೊಂದಿದ್ದು, ಈ ಪೈಕಿ 10 ಎಕರೆಯಲ್ಲಿ ಸಾವಯವ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಹಲವು ಫೋಟೋಗಳನ್ನು ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು.
ಇದೀಗ ಧೋನಿ ಅವರ ಫಾರ್ಮ್ ಹೌಸ್ ನಲ್ಲಿ ಬೆಳೆದಿದ್ದ ತರಕಾರಿ ದುಬೈ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ ಎಂದು ತಿಳಿದು ಬಂದಿದೆ. ಇದರ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದ್ದು, ಸದ್ಯದಲ್ಲೇ ದುಬೈ ಜನತೆ ಧೋನಿ ಫಾರ್ಮ್ ಹೌಸ್ ನ ತರಕಾರಿ ಸವಿಯಲಿದ್ದಾರೆ. ಪ್ರಸ್ತುತ ಮಹೇಂದ್ರ ಸಿಂಗ್ ಧೋನಿ ಕುಟುಂಬದೊಂದಿಗೆ ದುಬೈನಲ್ಲಿ ರಜೆ ಕಳೆಯುತ್ತಿದ್ದು, ಇದೇ ಸಂದರ್ಭದಲ್ಲಿ ಹನಿಮೂನ್ ಗಾಗಿ ದುಬೈಗೆ ಬಂದಿದ್ದ ಯಜುವೇಂದ್ರ ಚಾಹಲ್ ದಂಪತಿಗೆ ಔತಣಕೂಟ ನೀಡಿದ್ದಾರೆ.
https://www.instagram.com/p/BHyxbpEjcPL/?utm_source=ig_web_copy_link