ತುಮಕೂರು: ಡಿಟೆಕ್ಷನ್ ಸೆಂಟರ್ ನಿಂದ ಇಬ್ಬರು ವಿದೇಶಿ ಮಹಿಳೆಯರು ಪರಾರಿಯಾಗಿರುವ ಘಟನೆ ತುಮಕೂರಿನ ದಿಬ್ಬೂರು ಕೇಂದ್ರದಲ್ಲಿ ನಡೆದಿದೆ.
ರೇಷ್ಮಾ (45) ಹಾಗೂ ಲಿಝಾ (25) ಪರಾರಿಯಾಗಿರುವ ಮಹಿಳೆಯರು. ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ತುಮಕೂರಿನ ಬಲಿಯ ನಿರಾಶ್ರಿತರ ಕೇಂದ್ರದಲ್ಲಿದ್ದರು.
ಎರಡು ತಿಂಗಳಿಂದ ಡಿಟೆಕ್ಷನ್ ನಿರಾಶ್ರಿತರ ಕೇಂದ್ರದಲ್ಲಿದ್ದ ಇಬ್ಬರು ಮಹಿಳೆಯರು ಇದೀಗ ಏಕಾಏಕಿ ನಾಪತ್ತೆಯಾಗಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.