ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರ್ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡ್ತಿದ್ರೆ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿ. ದೆಹಲಿಯಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸಿದ್ರೆ ನಿಮಗೆ 3 ಲಕ್ಷ ರೂಪಾಯಿವರೆಗೆ ಲಾಭ ಸಿಗಲಿದೆ. ಎಲೆಕ್ಟ್ರಾನಿಕ್ ವಾಹನಗಳ ಖರೀದಿ ಉತ್ತೇಜಿಸಲು ದೆಹಲಿ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗಾಗಿ ಸ್ವಿಚ್ ದೆಹಲಿ ಅಭಿಯಾನ ಶುರು ಮಾಡಿದೆ.
ದೆಹಲಿ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ 1.5 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗ್ತಿದೆ. ದೆಹಲಿ ಸರ್ಕಾರ ರಸ್ತೆ ತೆರಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳ ನೋಂದಣಿಯನ್ನು ಉಚಿತ ಮಾಡಿದೆ. ಇದ್ರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ವಾಹನಗಳು ಕಡಿಮೆಯಾಗುವುದರ ಜೊತೆಗೆ ಮಾಲಿನ್ಯ ಕಡಿಮೆಯಾಗುವ ಸಾಧ್ಯತೆಯಿದೆ.
2024 ರ ವೇಳೆಗೆ ದೆಹಲಿಯಲ್ಲಿ ಮಾರಾಟವಾಗುವ ಹೊಸ ವಾಹನಗಳಲ್ಲಿ ಶೇಕಡಾ 25 ರಷ್ಟು ಎಲೆಕ್ಟ್ರಿಕ್ ವಾಹನಗಳಾಗುವ ಸಾಧ್ಯತೆಯಿದೆ ಎಂದು ಕೇಜ್ರಿವಾಲ್ ಸರ್ಕಾರ ಹೇಳಿದೆ. ದೆಹಲಿ ಸರ್ಕಾರ 2 ಮತ್ತು 3 ಚಕ್ರ ವಾಹನಗಳಿಗೆ 30,000 ರೂಪಾಯಿ ಸಬ್ಸಿಡಿ ನೀಡಲು ನಿರ್ಧರಿಸಿದೆ. ಎಲೆಕ್ಟ್ರಿಕ್ ಕಾರುಗಳಿಗೆ 1.5 ಲಕ್ಷ ರೂಪಾಯಿವರೆಗೆ ರಿಯಾಯಿತಿ ನೀಡಲಾಗುವುದು.
ಟಾಟಾ ನೆಕ್ಸನ್ ಇವಿ ಖರೀದಿ ಮಾಡಿದ್ರೆ 3 ಲಕ್ಷಕ್ಕೂ ಹೆಚ್ಚು ರೂಪಾಯಿ ರಿಯಾಯಿತಿ ಸಿಗಲಿದೆ. ಎಕ್ಸ್ ಎಂ ಟ್ರಿಮ್ನಲ್ಲಿ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ರಿಯಾಯಿತಿ 1,40,500 ರೂಪಾಯಿ. ಎಕ್ಸ್ Z ಡ್ ರೂಪಾಂತರದಲ್ಲಿ 1,49,900 ರೂಪಾಯಿ ರಿಯಾಯಿತಿ ಸಿಗ್ತಿದೆ.