ನೀವು ಕೂಡ ವಾಟ್ಸಾಪ್ ಬಳಕೆದಾರರಾಗಿದ್ದು ಸಂದೇಶ ರವಾನಿಸೋಕೆ ನೀವು ಇದೇ ಅಪ್ಲಿಕೇಶನ್ಗೆ ಅವಲಂಬಿತರಾಗಿದ್ದರೆ ಈ ಸ್ಟೋರಿಯನ್ನ ನೀವು ಓದಲೇಬೇಕು. ಆಂಡ್ರಾಯ್ಡ್ ಬಳಕೆದಾರರು ಹ್ಯಾಕರ್ಗಳ ಮೇನ್ ಟಾರ್ಗೆಟ್.
ಅನೇಕ ಬಾರಿ ಹ್ಯಾಕರ್ಸ್ ಮೊಬೈಲ್ನ ವಿವಿಧ ಅಪ್ಲಿಕೇಶನ್ಗಳ ಸಹಾಯದಿಂದ ನಮ್ಮ ಗೌಪ್ಯ ಮಾಹಿತಿಗಳನ್ನ ಕದ್ದು ಬಿಡ್ತಾರೆ. ಇದೀಗ ವಾಟ್ಸಾಪ್ ಮೆಸೇಜ್ಗಳೂ ಕೂಡ ಹ್ಯಾಕರ್ಗಳ ಅಸ್ತ್ರವಾಗಿದೆ.
ವಾಟ್ಸಾಪ್ನಲ್ಲಿ ಲಿಂಕ್ಗಳನ್ನ ಕಳುಹಿಸಲಾಗುತ್ತೆ. ಅಂದರೆ ಲಿಂಕ್ಗಳ ಜೊತೆಯಲ್ಲಿ ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಮೊಬೈಲ್ ಗೆಲ್ಲಬಹುದು ಎಂದೆಲ್ಲ ಆಮಿಷಗಳುಳ್ಳ ಮೆಸೇಜ್ಗಳು ಇರುತ್ತವೆ. ನೀವಿದನ್ನ ಕ್ಲಿಕ್ ಮಾಡುತ್ತಿದ್ದಂತೆಯೇ ನಕಲಿ ವೆಬ್ಸೈಟ್ ಖಾತೆ ತೆರೆಯುತ್ತದೆ.
ಈಗ ನಿಮಗೆ ಹುವೈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಎಂದು ಹೇಳಲಾಗುತ್ತೆ. ಆದರೆ ಇದು ಅಧಿಕೃತ ಹುವೈ ಅಪ್ಲಿಕೇಶನ್ ಅಲ್ಲ ಅನ್ನೋದು ನಿಮ್ಮ ಗಮನದಲ್ಲಿರಲಿ.
ಈ ವಿಚಾರವಾಗಿ ಮಾತನಾಡಿರುವ ವಾಟ್ಸಾಪ್ ಸಂಸ್ಥೆ ವಕ್ತಾರ, ಈ ರೀತಿಯ ನಕಲಿ ವೆಬ್ಸೈಟ್, ನಕಲಿ ಅಪ್ಲಿಕೇಶನ್ಗಳ ಮೂಲಕ ವಾಟ್ಸಾಪ್ ಬಳಕೆದಾರರ ಮಾಹಿತಿ ಕದಿಯಲಾಗುತ್ತಿದೆ. ನಾವು ಈ ಬಗ್ಗೆ ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ರೀತಿಯ ಮೆಸೇಜ್ಗಳ ಜೊತೆ ಬರುವ ಲಿಂಕ್ಗಳನ್ನ ಕ್ಲಿಕ್ ಮಾಡಲೇಬೇಡಿ. ಅಲ್ಲದೇ ಇಂತಹ ಮೆಸೇಜ್ಗಳನ್ನ ಫಾರವರ್ಡ್ ಮಾಡುವ ಬದಲು ಡಿಲೀಟ್ ಮಾಡಿ ಎಂದು ವಾಟ್ಸಾಪ್ ಮನವಿ ಮಾಡಿದೆ.