ಈ ವರ್ಷ ದೀಪಾವಳಿ ವಾರಾಂತ್ಯ ರಜೆಗೆ ಹೊಂದಿಕೊಂಡಿದ್ದು, ಸಾಲು ಸಾಲು ರಜೆಗಳು ಬಂದಿರುವುದರಿಂದ ನಿಮ್ಮ ಪ್ರವಾಸ, ವ್ಯಾಪಾರ ವಹಿವಾಟುಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.
ನಾಲ್ಕನೇ ಶನಿವಾರ ಬ್ಯಾಂಕ್ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ರಜೆ ಇರುತ್ತದೆ. ಟೆಕ್ಕಿಗಳು ಸೇರಿದಂತೆ ಬಹುತೇಕ ಖಾಸಗಿ ನೌಕರರಿಗೆ ರಜೆ ಇರುತ್ತದೆ. ಶನಿವಾರ, ಭಾನುವಾರದ ವೀಕೆಂಡ್ ರಜೆ ಮುಗಿದರೆ ಅಕ್ಟೋಬರ್ 24 ಸೋಮವಾರ ನರಕ ಚತುರ್ದಶಿ, 25 ರಂದು ಅಮಾವಾಸ್ಯೆ ಇದೆ. ಇದೊಂದು ದಿನ ರಜೆ ಹಾಕಿದರೆ ಅ.26 ರಂದು ಬಲಿಪಾಡ್ಯಮಿ ರಜೆ ಇರುತ್ತದೆ.
ಹೀಗಾಗಿ ಪ್ಲಾನ್ ಮಾಡಿಕೊಂಡರೆ ವಾರಾಂತ್ಯ ರಜೆಯ ಜೊತೆಗೆ ಮೂರು ರಜೆಗಳು ಸಿಗಲಿವೆ, ಸಾಲು ಸಾಲು ರಜೆಗಳಿಂದ ಊರುಗಳಿಗೆ ತೆರಳುವವರು, ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಇನ್ನೂ ಬ್ಯಾಂಕುಗಳಿಗೂ ರಜೆ ಇರುವುದರಿಂದ ನಿಮ್ಮ ಬ್ಯಾಂಕಿಂಗ್ ವ್ಯವಹಾರ, ವ್ಯಾಪಾರ, ವಹಿವಾಟುಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.