ನವದೆಹಲಿ: ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 400 ರೂಪಾಯಿ, ಬೆಳ್ಳಿ ದರ 300 ರೂ. ಇಳಿಕೆಯಾಗಿದೆ.
10 ಗ್ರಾಂ ಚಿನ್ನದ ದರ 400 ರೂಪಾಯಿ ಕಡಿಮೆಯಾಗಿದ್ದು, 60,950 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 300 ರೂ. ಕಡಿಮೆಯಾಗಿ 73,300 ರೂ.ಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಇಳಿಕೆಯಾಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿಯೂ ಬೆಲೆ ಕಡಿಮೆಯಾಗಿದೆ. ದೀಪಾವಳಿ ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಬೆಲೆ ಕೊಂಚ ಕಡಿಮೆಯಾಗಿದೆ.