ನವದೆಹಲಿ: ಆಧಾರ್ ಮಾಹಿತಿಗಳನ್ನು ಉಚಿತವಾಗಿ ಅಪ್ಡೇಟ್ ಮಾಡುವ ದಿನಾಂಕವನ್ನು ಆಧಾರ್ ಪ್ರಾಧಿಕಾರ ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ.
ಈ ಮೊದಲು ಡಿಸೆಂಬರ್ 15 ಆಧಾರ್ ವಿವರಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಕೊನೆಯ ದಿನವಾಗಿತ್ತು. ಇದನ್ನು 2024ರ ಮಾರ್ಚ್ 14 ರವರೆಗೆ ವಿಸ್ತರಿಸಲಾಗಿದೆ.
ಮೈ ಆಧಾರ್ ಪೋರ್ಟಲ್ ನಲ್ಲಿ ಮಾಡಲಾಗುವ ಆಧಾರ್ ಪರಿಷ್ಕರಣೆಗೆ ಮಾತ್ರ ಉಚಿತ ಸೌಲಭ್ಯ ಅನ್ವಯವಾಗಲಿದೆ. ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಷ್ಕರಣೆ ಮಾಡಿಸಿದರೆ 50 ರೂಪಾಯಿ ಶುಲ್ಕ ಪಾವತಿಸಬೇಕಿದೆ. ಉಚಿತ ಅಪ್ಡೇಟ್ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 10 ವರ್ಷಗಳಿಂದ ಆಧಾರ್ ಅಪ್ಡೇಟ್ ಮಾಡದವರು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಮತ್ತೊಮ್ಮೆ ಆಧಾರ್‌ನ ಉಚಿತ ನವೀಕರಣದ ಗಡುವನ್ನು ಡಿಸೆಂಬರ್ 14 ರಿಂದ ಮಾರ್ಚ್ 14, 2023 ರವರೆಗೆ 3 ತಿಂಗಳವರೆಗೆ ವಿಸ್ತರಿಸಿದೆ. ಆದಾಗ್ಯೂ, ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದೆ ಮತ್ತು ಈ ಹಿಂದೆ ಇದ್ದಂತೆ ಭೌತಿಕ ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಪಾವತಿಸಬೇಕಿದೆ.