alex Certify ಕೊರೊನಾ ಸಂಕಷ್ಟದಲ್ಲಿದ್ದ ಗೃಹ, ವಾಹನ ಸೇರಿ ಕೃಷಿಯೇತರ ಸಾಲಗಾರರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದಲ್ಲಿದ್ದ ಗೃಹ, ವಾಹನ ಸೇರಿ ಕೃಷಿಯೇತರ ಸಾಲಗಾರರಿಗೆ ಗುಡ್ ನ್ಯೂಸ್

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನಲ್ಲಿ ಬಡ್ಡಿ ದರ ಕಡಿತಗೊಳಿಸಲಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗ್ರಾಹಕರಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕೊಡುಗೆ ನೀಡಿದ್ದು, ಶೇಕಡ 1 ರಷ್ಟು ಬಡ್ಡಿ ದರ ಕಡಿತಗೊಳಿಸಿದೆ.

ಕೃಷಿಯೇತರ ಸಾಲಗಳ ಮೇಲಿನ ಬಡ್ಡಿ ದರ ಕಡಿತಗೊಳಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ತಿಳಿಸಿದ್ದಾರೆ.

ಚಿನ್ನಾಭರಣ ಸಾಲ, ಸಾಮಾನ್ಯ ಸಾಲ, ವೇತನಾಧಾರ ಸಾಲ, ವಾಹನ, ಗೃಹ ನಿರ್ಮಾಣ, ಕಟ್ಟಡ, ನಿವೇಶನ ಅಡಮಾನ ಅಥವಾ ಖರೀದಿ, ಓವರ್ ಡ್ರಾಫ್ಟ್, ವಾಣಿಜ್ಯ ಸಂಕೀರ್ಣ ಮತ್ತು ನಗದು ಸಾಲಗಳ ಮೇಲಿನ ಬಡ್ಡಿ ದರ ಕಡಿತ ಗೊಳಿಸಲಾಗಿದೆ. ಜೂನ್ 1 ರಿಂದ ವಿತರಿಸುವ ಸಾಲಗಳಿಗೆ ಮಾತ್ರ ಇದು ಅನ್ವಯವಾಗಲಿದ್ದು, ಗ್ರಾಹಕರು ಅವಕಾಶ ಬಳಸಿಕೊಳ್ಳುವಂತೆ ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...