ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ಮಾನ್ಸೂನ್ ರೈತ ವಾಹನ ಉತ್ಸವ-2022 ಎನ್ನುವ ವಿಶೇಷ ಸಾಲ ಯೋಜನೆಯನ್ನು ಜಿಲ್ಲೆಯ ರೈತರಿಗಾಗಿಯೇ ಜಾರಿಗೆ ತಂರಲಾಗಿದೆ.
ಈ ಯೋಜನೆಯಲ್ಲಿ ನಾಲ್ಕು ಚಕ್ರದ ವಾಹನ ಖರೀದಿ ಸಾಲಕ್ಕೆ ಮಾಸಿಕ ಬಡ್ಡಿ ಕೇವಲ 0.75 ಪೈಸೆ, ದ್ವಿಚಕ್ರ ವಾಹನ ಖರೀದಿ ಸಾಲಕ್ಕೆ ಮಾಸಿಕ ಬಡ್ಡಿ ಕೇವಲ 0.79 ಪೈಸೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆಯು ಜು. 1 ರಿಂದ ಪ್ರಾರಂಭಗೊಂಡಿದ್ದು ಆ. 31 ರವರೆಗೆ ಸೀಮಿತ ಅವಧಿಗೆ ಮಾತ್ರ ಜಾರಿಯಲ್ಲಿರುತ್ತದೆ. ಆದ್ದರಿಂದ ಜಿಲ್ಲೆಯ ರೈತ ಭಾಂಧವರು ಈ ಯೋಜನೆಯನ್ನು ಸದುಪಯೋಗಿಸಿಕೊಳ್ಳಬೇಕಾಗಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ತಿಳಿಸಿದ್ದಾರೆ.