ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಗಳಲ್ಲಿ ಒಂದಾಗಿರುವ ಏರ್ಟೆಲ್ ಗ್ರಾಹಕರ ಮಾಹಿತಿ ಸೋರಿಕೆಯಾಗಿದೆ.
ಜಮ್ಮು ಮತ್ತು ಕಾಶ್ಮೀರ ವಲಯದ ಸುಮಾರು 25 ಲಕ್ಷ ಭಾರ್ತಿ ಏರ್ಟೆಲ್ ಗ್ರಾಹಕರ ಮಾಹಿತಿ ಸೋರಿಕೆಯಾಗಿದೆ. ಗ್ರಾಹಕರೆಲ್ಲರ ಆಧಾರ್ ಸಂಖ್ಯೆ, ಅಡ್ರೆಸ್ ಮತ್ತು ಜನ್ಮದಿನಾಂಕ ಸೋರಿಕೆಯಾಗಿವೆ ಎಂದು ಆರೋಪಿಸಲಾಗಿದ್ದು ಏರ್ಟೆಲ್ ಇದನ್ನು ಅಲ್ಲಗಳೆದಿದ್ದು, ಎಲ್ಲಾ ಗ್ರಾಹಕರ ಮಾಹಿತಿ ಸುರಕ್ಷಿತವಾಗಿದೆ. ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರ್ತಿ ಏರ್ಟೆಲ್ ಗೆ ‘ರೆಡ್ ರಾಬಿಟ್’ ಎನ್ನುವ ಹ್ಯಾಕರಗಳು ನಿಮ್ಮ ಗ್ರಾಹಕರ ಮಾಹಿತಿಗೆ ಕನ್ನ ಹಾಕಿದ್ದು ಹಣ ನೀಡಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಸೋರಿಕೆಯಾದ ಡೇಟಾಬೇಸ್‌ನ ಮಾದರಿಯನ್ನು ಸೈಬರ್ ಸೆಕ್ಯುರಿಟಿ ಸಂಶೋಧಕ ರಾಜ್‌ಶೇಖರ್ ರಾಜಹರಿಯಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದು ಚಂದಾದಾರರ ಮುಖವಾಡದ ವಿವರಗಳನ್ನು ತೋರಿಸುತ್ತದೆ. ಭಾರ್ತಿ ಏರ್‌ಟೆಲ್ ಮತ್ತು ಹ್ಯಾಕರ್‌ಗಳ ನಡುವೆ ‘ರೆಡ್ ರಾಬಿಟ್ ಟೀಮ್’ ಹೆಸರಿನ ಇಮೇಲ್ ಸಂಭಾಷಣೆಯ ವೀಡಿಯೊವನ್ನು ರಾಜಹರಿಯಾ ಹಂಚಿಕೊಂಡಿದ್ದಾರೆನ್ನಲಾಗಿದೆ.