ಕಲಬುರಗಿ: ತೊಗರಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಮೊದಲ ಬಾರಿಗೆ ಗರಿಷ್ಠ ಮಟ್ಟ ತಲುಪಿದ ತೊಗರಿ ಕ್ವಿಂಟಲ್ ಗೆ 12,140 ರೂ.ಗೆ ಏರಿಕೆಯಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ವರ್ಷ ಪ್ರವಾಹ ಮತ್ತು ನೆಟೆ ರೋಗದಿಂದಾಗಿ ಇಳುವರಿ ಕಡಿಮೆಯಾಗಿದ್ದ ಕಾರಣ ತೊಗರಿ ದರ ಸಾರ್ವಕಾಲಿಕ ಏರಿಕೆ ಕಂಡಿದೆ. ಆದರೆ, ಬೆಲೆ ಏರಿಕೆಯ ಲಾಭ ರೈತರಿಗೆ ಸಿಗುತ್ತಿಲ್ಲ. ತೊಗರಿ ಬೆಲೆ ಏರಿಕೆ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಲಬುರಗಿಯ ಗಂಜ್ ಎಪಿಎಂಸಿಯಲ್ಲಿ ಬುಧವಾರ ಕ್ವಿಂಟಲ್ ತೊಗರಿದರ 12,140 ರೂ.ಗೆ ಮಾರಾಟವಾಗಿದೆ. ಕಳೆದ ವಾರ 10 ಸಾವಿರ ರೂ. ಇದ್ದ ದರ 12,000 ರೂ. ಗಡಿ ದಾಟಿದ್ದು, ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.