ಕಲ್ಬುರ್ಗಿ: ತೊಗರಿ ಬೇಳೆ ದರ ಕ್ವಿಂಟಲ್ ಗೆ 8275 ರೂಪಾಯಿಗೆ ಏರಿಕೆಯಾಗಿದೆ. ಕಲಬುರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತೊಗರಿ ಆವಕ ಕಡಿಮೆಯಾಗಿದೆ.
ಸರ್ಕಾರ ಕಳೆದ ವರ್ಷ ಕ್ವಿಂಟಲ್ ತೊಗರಿಗೆ 6300 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿತ್ತು. ಈ ವರ್ಷ 6600 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ತೊಗರಿ ದರ 8000 ರೂ.ಗೂ ಅಧಿಕ ಇದೆ.
ಮಾರುಕಟ್ಟೆಗೆ ತೊಗರಿ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಕಳೆದ ಆರು ತಿಂಗಳ ಅವಧಿಯಲ್ಲಿ 200 ರೂ., 300 ರೂ.ನಂತೆ ತೊಗರಿ ದರ ಏರಿಕೆ ಕಾಣುತ್ತಲೇ ಇದೆ. ಅತಿವೃಷ್ಟಿ, ಬೆಳೆ ಹಾನಿಯಿಂದಾಗಿ ತೊಗರಿ ಆವಕ ಕಡಿಮೆಯಾಗಿರುವುದು ಮತ್ತು ಬೇಡಿಕೆಗೆ ತಕ್ಕಂತೆ ತೊಗರಿ ಸಿಗದಿರುವುದು ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.